- ಆಣೆ ಮಾಡುವಂತೆ ಯಾರೂ ವಿನಂತಿಸದಿದ್ದರೂ, ವಿಷಯವನ್ನು ಒತ್ತಿ ಹೇಳಲು ಆಣೆ ಮಾಡಬಹುದು. ಅದು ಭವಿಷ್ಯಕ್ಕೆ ಸಂಬಂಧಿಸಿದ್ದಾಗಿದ್ದರೂ ಸಹ.
- ಪ್ರತಿಜ್ಞೆ ಮಾಡಿದ ನಂತರ "ಇನ್ ಶಾ ಅಲ್ಲಾಹ್" (ಅಲ್ಲಾಹು ಇಚ್ಛಿಸಿದರೆ) ಎಂದು ಹೇಳಲು ಅನುಮತಿಯಿದೆ. ಪ್ರತಿಜ್ಞೆ ಮಾಡುವಾಗಲೇ "ಇನ್ ಶಾ ಅಲ್ಲಾಹ್" ಹೇಳುವೆನೆಂದು ಸಂಕಲ್ಪ ಮಾಡಿದರೆ, ಮತ್ತು ಪ್ರತಿಜ್ಞೆಯೊಂದಿಗೆ ಅದನ್ನೂ ಹೇಳಿದರೆ, ಆ ಪ್ರತಿಜ್ಞೆಯನ್ನು ಮುರಿದದ್ದಕ್ಕಾಗಿ ಪರಿಹಾರ ನೀಡುವುದು ಕಡ್ಡಾಯವಲ್ಲ.
- ಆಣೆ ಮಾಡಿದ ಕಾರ್ಯಕ್ಕಿಂತಲೂ ಇನ್ನೊಂದು ಕಾರ್ಯವು ಉತ್ತಮವಾಗಿ ಕಂಡರೆ, ಆ ಆಣೆಗೆ ಪರಿಹಾರ ನೀಡಿ ಮುರಿಯುವುದನ್ನು ಪ್ರೋತ್ಸಾಹಿಸಲಾಗಿದೆ.