- ಮಳೆ ಸುರಿದ ನಂತರ, "ಮುತಿರ್‌ನಾ ಬಿಫದ್ಲಿಲ್ಲಾಹಿ ವರಹ್ಮತಿಹೀ" (ಅಲ್ಲಾಹನ ಅನುಗ್ರಹ ಮತ್ತು ದಯೆಯಿಂದ ಮಳೆ ಸುರಿಯಿತು) ಎಂದು ಹೇಳುವುದು ಅಪೇಕ್ಷಣೀಯವಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
- ಮಳೆ ಸುರಿಯುವುದು ಮುಂತಾದ (ಅಲ್ಲಾಹನ) ಅನುಗ್ರಹಗಳನ್ನು ನಕ್ಷತ್ರಗಳ ಸೃಷ್ಟಿ ಮತ್ತು ಪ್ರವೃತ್ತಿ ಎಂದು ನಂಬುವವನು ದೊಡ್ಡ ಸತ್ಯನಿಷೇಧ (ಕುಫ್ರ್ ಅಕ್ಬರ್) ಮಾಡಿದ ಸತ್ಯನಿಷೇಧಿಯಾಗಿದ್ದಾನೆ. ಆದರೆ ಅದು ಮಳೆ ಸುರಿಯಲು ಕಾರಣವಾಗಿದೆ ಎಂದು ಹೇಳುವವನು ಚಿಕ್ಕ ಸತ್ಯನಿಷೇಧ (ಕುಫ್ರ್ ಅಸ್ಗರ್) ಮಾಡಿದ ಸತ್ಯನಿಷೇಧಿಯಾಗಿದ್ದಾನೆ. ಏಕೆಂದರೆ ಅದು ಮಳೆ ಸುರಿಯಲು ಧಾರ್ಮಿಕ ಅಥವಾ ಭೌತಿಕ ಕಾರಣವಲ್ಲ.
- ಅನುಗ್ರಹವನ್ನು ನಿಷೇಧಿಸಿದರೆ ಅದು ಸತ್ಯನಿಷೇಧಕ್ಕೆ ಕಾರಣವಾಗುತ್ತದೆ ಮತ್ತು ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸಿದರೆ ಅದು ಸತ್ಯವಿಶ್ವಾಸಕ್ಕೆ ಕಾರಣವಾಗುತ್ತದೆ ಎಂದು ಈ ಹದೀಸ್ ತಿಳಿಸುತ್ತದೆ.
- ಇಂತಿಂತಹ ನಕ್ಷತ್ರದ ಕಾರಣದಿಂದ ಮಳೆ ಸುರಿಯಿತು ಎಂದು ಹೇಳುವುದನ್ನು ಈ ಹದೀಸ್ ವಿರೋಧಿಸುತ್ತದೆ. ಅದರ ಮೂಲಕ ಉದ್ದೇಶಿಸುವುದು ಮಳೆ ಸುರಿಯುವ ಸಮಯವಾಗಿದ್ದರೂ ಸರಿ. ಏಕೆಂದರೆ ಅದು ಬಹುದೇವಾರಾಧನೆಗೆ ಕಾರಣವಾಗುವ ಸಾಧ್ಯತೆ ಇದೆ.
- ಒಳಿತನ್ನು ಪಡೆಯುವುದು ಮತ್ತು ಕೆಡುಕನ್ನು ದೂರೀಕರಿಸುವ ವಿಷಯದಲ್ಲಿ ನಮ್ಮ ಹೃದಯವು ಅಲ್ಲಾಹನನ್ನು ಅವಲಂಬಿಸಿಕೊಂಡಿರಬೇಕಾದುದು ಕಡ್ಡಾಯವೆಂದು ಈ ಹದೀಸ್ ತಿಳಿಸುತ್ತದೆ.