- ಭವಿಷ್ಯ ನುಡಿಯುವುದು, ಭವಿಷ್ಯ ನುಡಿಯುವವರ ಬಳಿಗೆ ಹೋಗಿ ಭವಿಷ್ಯದ ಬಗ್ಗೆ ಅವರೊಡನೆ ಕೇಳುವುದು ನಿಷೇಧಿಸಲಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
- ಕೆಲವೊಮ್ಮೆ ಪಾಪ ಮಾಡುವುದರಿಂದ ಮನುಷ್ಯನಿಗೆ ಅವನ ಸತ್ಕರ್ಮದ ಪ್ರತಿಫಲವು ತಡೆಹಿಡಿಯಲ್ಪಡುತ್ತದೆ.
- ರಾಶಿಫಲ, ಹಸ್ತಸಾಮುದ್ರಿಕೆ, ಪಿಂಗಾಣಿ ಬರಹ ಮುಂತಾದವುಗಳನ್ನು ಕೇವಲ ಕುತೂಹಲಕ್ಕಾಗಿಯಾದರೂ ನೋಡುವುದು ಈ ಹದೀಸಿನಲ್ಲಿ ಒಳಪಡುತ್ತದೆ. ಏಕೆಂದರೆ ಇವೆಲ್ಲವೂ ಜ್ಯೋತಿಷ್ಯ ಮತ್ತು ಭವಿಷ್ಯ ಜ್ಞಾನದ ಭಾಗಗಳಾಗಿವೆ.
- ಭವಿಷ್ಯ ನುಡಿಯುವವನ ಬಳಿಗೆ ಹೋಗಿ ಅವನೊಡನೆ ಭವಿಷ್ಯವನ್ನು ಕೇಳುವವರಿಗೆ ಸಿಗುವ ಪ್ರತಿಫಲವು ಇದಾದರೆ ಭವಿಷ್ಯ ನುಡಿಯುವವನ ಪ್ರತಿಫಲ ಏನಾಗಿರಬಹುದು?
- ನಲ್ವತ್ತು ದಿನಗಳಲ್ಲಿ ನಿರ್ವಹಿಸಿದ ನಮಾಝ್ ಸಿಂಧುವಾಗುತ್ತದೆ ಮತ್ತು ಅದನ್ನು ಪುನಃ ನಿರ್ವಹಿಸಬೇಕಾಗಿಲ್ಲ. ಆದರೆ ಆ ನಮಾಝ್‌ಗಳಿಗೆ ಪ್ರತಿಫಲ ದೊರಕುವುದಿಲ್ಲ.