- ಅಲ್ಲಾಹನಲ್ಲಿ ಭರವಸೆಯಿಡುವುದು ಮತ್ತು ಅವನ ತೀರ್ಮಾನ ಮತ್ತು ವಿಧಿಯಲ್ಲಿ ನಂಬಿಕೆಯಿಡುವುದು ಕಡ್ಡಾಯವಾಗಿದೆ; ಹಾಗೂ ಅಪಶಕುನ, ವಾಮಾಚಾರ ಮತ್ತು ಜ್ಯೋತಿಷ್ಯಗಳಲ್ಲಿ ನಂಬಿಕೆಯಿಡುವುದು ಹಾಗೂ ಅವರೊಡನೆ ಭವಿಷ್ಯದ ಬಗ್ಗೆ ಕೇಳುವುದು ನಿಷೇಧಿಸಲಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ.
- ತನಗೆ ಭವಿಷ್ಯ ತಿಳಿದಿದೆಯೆಂದು ವಾದಿಸುವುದು ತೌಹೀದ್‌ಗೆ (ಏಕದೇವತ್ವಕ್ಕೆ) ವಿರುದ್ಧವಾದ ಶಿರ್ಕ್ (ಬಹುದೇವತ್ವ) ಆಗಿದೆ.
- ಜ್ಯೋತಿಷಿಗಳ ಮಾತುಗಳನ್ನು ನಂಬುವುದು ಮತ್ತು ಅವರ ಬಳಿಗೆ ತೆರಳುವುದು ನಿಷೇಧಿಸಲಾಗಿದೆಯೆಂದು ಈ ಹದೀಸ್ ತಿಳಿಸುತ್ತದೆ. ಹಸ್ತಸಾಮುದ್ರಿಕೆ, ಪಿಂಗಾಣಿ ಬರಹ, ರಾಶಿಫಲ ಮುಂತಾದವುಗಳನ್ನು ನಂಬುವುದು ಅಥವಾ ಕುತೂಹಲಕ್ಕಾಗಿ ಅಂತಹ ವಿಷಯಗಳನ್ನು ಓದುವುದು ಇದರಲ್ಲಿ ಒಳಪಡುತ್ತದೆ.