/ ನನ್ನ ಈ ಮಸೀದಿಯಲ್ಲಿ ನಿರ್ವಹಿಸುವ ಒಂದು ನಮಾಝ್ ಇತರ ಮಸೀದಿಗಳಲ್ಲಿ ನಿರ್ವಹಿಸುವ ಸಾವಿರ ನಮಾಝ್‌ಗಳಿಗಿಂತಲೂ ಶ್ರೇಷ್ಠವಾಗಿದೆ. ಮಸ್ಜಿದುಲ್ ಹರಾಂ ಹೊರತುಪಡಿಸಿ...

ನನ್ನ ಈ ಮಸೀದಿಯಲ್ಲಿ ನಿರ್ವಹಿಸುವ ಒಂದು ನಮಾಝ್ ಇತರ ಮಸೀದಿಗಳಲ್ಲಿ ನಿರ್ವಹಿಸುವ ಸಾವಿರ ನಮಾಝ್‌ಗಳಿಗಿಂತಲೂ ಶ್ರೇಷ್ಠವಾಗಿದೆ. ಮಸ್ಜಿದುಲ್ ಹರಾಂ ಹೊರತುಪಡಿಸಿ...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನನ್ನ ಈ ಮಸೀದಿಯಲ್ಲಿ ನಿರ್ವಹಿಸುವ ಒಂದು ನಮಾಝ್ ಇತರ ಮಸೀದಿಗಳಲ್ಲಿ ನಿರ್ವಹಿಸುವ ಸಾವಿರ ನಮಾಝ್‌ಗಳಿಗಿಂತಲೂ ಶ್ರೇಷ್ಠವಾಗಿದೆ. ಮಸ್ಜಿದುಲ್ ಹರಾಂ ಹೊರತುಪಡಿಸಿ."
متفق عليه

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಮಸೀದಿಯಲ್ಲಿ ನಮಾಝ್ ಮಾಡುವುದರ ಶ್ರೇಷ್ಠತೆಯನ್ನು ವಿವರಿಸಿದ್ದಾರೆ. ಅಲ್ಲಿ ನಿರ್ವಹಿಸುವ ಒಂದು ನಮಾಝ್, ಭೂಮಿಯಲ್ಲಿರುವ ಇತರ ಎಲ್ಲಾ ಮಸೀದಿಗಳಲ್ಲಿ ನಿರ್ವಹಿಸುವ ಒಂದು ಸಾವಿರ ನಮಾಝ್‌ಗಳಿಗಿಂತಲೂ ಹೆಚ್ಚು ಪ್ರತಿಫಲವನ್ನು ಹೊಂದಿದೆ. ಆದರೆ ಮಕ್ಕಾದಲ್ಲಿರುವ ಮಸ್ಜಿದುಲ್ ಹರಾಂ ಹೊರತುಪಡಿಸಿ. ಏಕೆಂದರೆ, ಅಲ್ಲಿ ನಿರ್ವಹಿಸುವ ನಮಾಝ್ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಸೀದಿಯಲ್ಲಿ ನಿರ್ವಹಿಸುವ ನಮಾಝ್‌ಗಿಂತಲೂ ಶ್ರೇಷ್ಠವಾಗಿದೆ.

Hadeeth benefits

  1. ಮಸ್ಜಿದುಲ್ ಹರಾಂ ಮತ್ತು ಮಸ್ಜಿದುನ್ನಬವಿಯಲ್ಲಿ ನಿರ್ವಹಿಸುವ ನಮಾಝ್‌ಗೆ ಹಲವು ಪಟ್ಟು ಹೆಚ್ಚು ಪ್ರತಿಫಲವಿದೆ.
  2. ಮಸ್ಜಿದುಲ್ ಹರಾಂನಲ್ಲಿ ನಿರ್ವಹಿಸುವ ಒಂದು ನಮಾಝ್ ಇತರ ಮಸೀದಿಗಳಲ್ಲಿ ನಿರ್ವಹಿಸುವ ಒಂದು ಲಕ್ಷ ನಮಾಝ್‌ಗಳಿಗಿಂತಲೂ ಶ್ರೇಷ್ಠವಾಗಿದೆ.