- ಶುಕ್ರವಾರದ ಪ್ರವಚನ ಕೇಳುತ್ತಿರುವಾಗ ಮಾತನಾಡುವುದು ನಿಷಿದ್ಧವಾಗಿದೆ. ಅದು ಕೆಡುಕನ್ನು ವಿರೋಧಿಸಲು, ಸಲಾಂಗೆ ಉತ್ತರಿಸಲು ಅಥವಾ ಸೀನಿದವನಿಗೆ ಯರ್ಹಮುಕಲ್ಲಾಹ್ ಎಂದು ಪ್ರಾರ್ಥಿಸುವುದಕ್ಕಾದರೂ ಸಹ.
- ಆದರೆ ಇಮಾಮರು ಸಭಿಕರೊಂದಿಗೆ ಮತ್ತು ಸಭಿಕರು ಇಮಾಮರೊಂದಿಗೆ ಮಾತನಾಡುವುದನ್ನು ಇದರಿಂದ ಹೊರತುಪಡಿಸಲಾಗಿದೆ.
- ಅತ್ಯಗತ್ಯದ ಸಂದರ್ಭಗಳಲ್ಲಿ ಎರಡು ಪ್ರವಚನಗಳ ನಡುವೆ ಮಾತನಾಡಬಹುದು.
- ಪ್ರವಚನದ ಮಧ್ಯೆ ಇಮಾಮರು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೆಸರನ್ನು ಹೇಳಿದರೆ ಮೌನವಾಗಿ ಸಲಾತ್ ಹೇಳಬೇಕು. ಅದೇ ರೀತಿ, ಪ್ರಾರ್ಥನೆಗೆ ಮೌನವಾಗಿ ಆಮೀನ್ ಹೇಳಬೇಕು.