- ಪ್ರಶಂಸೆ ಅಥವಾ ಮುಖಸ್ತುತಿ ಮಾಡುವಾಗ ಧಾರ್ಮಿಕ ಎಲ್ಲೆ ಮೀರಬಾರದೆಂದು ಇಲ್ಲಿ ಎಚ್ಚರಿಸಲಾಗಿದೆ. ಏಕೆಂದರೆ ಅದು ಬಹುದೇವಾರಾಧನೆಗೆ ಕಾರಣವಾಗುವ ಸಾಧ್ಯತೆಯಿದೆ.
- ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಎಚ್ಚರಿಸಿದ ಸಂಗತಿಯು ಇಂದು ಈ ಸಮುದಾಯದಲ್ಲಿ ಕಂಡುಬರುತ್ತಿದೆ. ಕೆಲವರು ಪ್ರವಾದಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರ ವಿಷಯದಲ್ಲಿ ಎಲ್ಲೆ ಮೀರಿದರೆ, ಕೆಲವರು ಅವರ ಕುಟುಂಬದವರ ವಿಷಯದಲ್ಲಿ ಎಲ್ಲೆ ಮೀರಿದರು. ಇನ್ನು ಕೆಲವರು ಮಹಾಪುರುಷರ ವಿಷಯದಲ್ಲಿ ಎಲ್ಲೆ ಮೀರಿದರು. ಇವರೆಲ್ಲರೂ ಬಹುದೇವಾರಾಧನೆಯ ವಲಯದಲ್ಲಿ ಸೇರಿಕೊಂಡರು.
- ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮನ್ನು ಅಲ್ಲಾಹನ ದಾಸ ಎಂದು ಹೇಳಿದರು. ಅಂದರೆ, ಅವರು ಅಲ್ಲಾಹನ ಪೋಷಣೆ ಮತ್ತು ನಿಯಂತ್ರಣದಲ್ಲಿರುವ ಅವನ ದಾಸನಾಗಿದ್ದು, ಅಲ್ಲಾಹನ ಪ್ರಭುತ್ವದಲ್ಲಿ ಸೇರಿದ ಯಾವುದನ್ನೂ ಅವರಿಗೆ ಸೇರಿಸಿ ಹೇಳಬಾರದೆಂದು ವಿವರಿಸುವುದಕ್ಕಾಗಿ ಅವರು ಹೀಗೆ ಹೇಳಿದರು.
- ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮನ್ನು ಅಲ್ಲಾಹನ ಸಂದೇಶವಾಹಕ ಎಂದು ಹೇಳಿದರು. ಅವರು ಅಲ್ಲಾಹನ ಕಡೆಯಿಂದ ಕಳುಹಿಸಲಾದ ಅವನ ಸಂದೇಶವಾಹಕರಾಗಿದ್ದು, ಅವರ ಮಾತನ್ನು ನಂಬುವುದು ಮತ್ತು ಅವರನ್ನು ಅನುಸರಿಸುವುದು ಕಡ್ಡಾಯವೆಂದು ತಿಳಿಸುವುದಕ್ಕಾಗಿ ಅವರು ಹೀಗೆ ಹೇಳಿದರು.