- ಸಂದೇಶವಾಹಕರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಸರಿಸುವುದು ಅಲ್ಲಾಹನಿಗೆ ವಿಧೇಯತೆ ತೋರುವ ಒಂದು ಭಾಗವಾಗಿದೆ. ಅವರನ್ನು ಅನುಸರಿಸದಿರುವುದು ಅಲ್ಲಾಹನಿಗೆ ತೋರುವ ಅವಿಧೇಯತೆಯಾಗಿದೆ.
- ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಸರಿಸಿದರೆ ಸ್ವರ್ಗ ಖಾತ್ರಿಯಾಗುತ್ತದೆ ಮತ್ತು ಅವರನ್ನು ಅನುಸರಿಸದಿದ್ದರೆ ನರಕ ಖಾತ್ರಿಯಾಗುತ್ತದೆ.
- ಅಲ್ಲಾಹನಿಗೆ ಮತ್ತು ಸಂದೇಶವಾಹಕರಿಗೆ ವಿಧೇಯರಾಗಿರುವವರಿಗೆ ಈ ಹದೀಸ್ ಸುವಾರ್ತೆಯನ್ನು ತಿಳಿಸುತ್ತದೆ. ಅಂದರೆ ಅವರೆಲ್ಲರೂ ಸ್ವರ್ಗಕ್ಕೆ ಹೋಗುತ್ತಾರೆ. ಆದರೆ ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸದವರು ಸ್ವರ್ಗಕ್ಕೆ ಹೋಗುವುದಿಲ್ಲ.
- ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಮ್ಮ ಸಮುದಾಯದ ಮೇಲಿರುವ ಸಹಾನುಭೂತಿ ಮತ್ತು ಸಮುದಾಯಕ್ಕೆ ಸನ್ಮಾರ್ಗವನ್ನು ತೋರಿಸಲು ಅವರಲ್ಲಿದ್ದ ತವಕವನ್ನು ಈ ಹದೀಸ್ ವ್ಯಕ್ತಪಡಿಸುತ್ತದೆ.