- ಮಸೀದಿಯಲ್ಲಿ ಸಾಮೂಹಿಕವಾಗಿ ನಮಾಝ್ ನಿರ್ವಹಿಸುವುದರ ಬಗ್ಗೆ ಅಸಡ್ಡೆ ತೋರುವುದು ಗಂಭೀರ ವಿಷಯವಾಗಿದೆ.
- ಕಪಟವಿಶ್ವಾಸಿಗಳು ತೋರಿಕೆಗಾಗಿ ಮತ್ತು ಪ್ರಶಂಸೆಗಾಗಿ ಮಾತ್ರ ಆರಾಧನೆಗಳನ್ನು ನಿರ್ವಹಿಸುತ್ತಾರೆ. ಜನರಿಗೆ ಕಾಣುವ ಸಮಯದಲ್ಲಿ ಮಾತ್ರ ಅವರು ನಮಾಝ್ ನಿರ್ವಹಿಸಲು ಮಸೀದಿಗೆ ಬರುತ್ತಾರೆ.
- ಇಶಾ ಮತ್ತು ಫಜ್ರ್ ನಮಾಝ್‌ಗಳನ್ನು ಸಾಮೂಹಿಕವಾಗಿ ನಿರ್ವಹಿಸುವುದಕ್ಕೆ ಮಹಾ ಪ್ರತಿಫಲವಿದೆ ಮತ್ತು ಅಂಬೆಗಾಲಿಟ್ಟುಕೊಂಡಾದರೂ ಆ ನಮಾಝ್‌ಗಳನ್ನು ನಿರ್ವಹಿಸಲು ಬರಬೇಕಾಗಿದೆ.
- ನಿತ್ಯ ಇಶಾ ಮತ್ತು ಫಜ್ರ್ ನಮಾಝ್‌ಗಳನ್ನು ಸಾಮೂಹಿಕವಾಗಿ ಮಸೀದಿಯಲ್ಲಿ ನಿರ್ವಹಿಸಿದರೆ ಕಪಟತೆಯಿಂದ ಮುಕ್ತಿ ಸಿಗುತ್ತದೆ. ಆ ಎರಡು ನಮಾಝ್‌ಗಳಿಗೆ ಹೋಗದಿರುವುದು ಕಪಟವಿಶ್ವಾಸಿಗಳ ಲಕ್ಷಣವಾಗಿದೆ.