/ ಯಾರಾದರೂ ನಮಾಝನ್ನು ಮರೆತುಬಿಟ್ಟರೆ ನೆನಪಾದಾಗ ಅದನ್ನು ನಿರ್ವಹಿಸಲಿ. ಇದಲ್ಲದೆ ಅದಕ್ಕೆ ಬೇರೆ ಪ್ರಾಯಶ್ಚಿತ್ತವಿಲ್ಲ...

ಯಾರಾದರೂ ನಮಾಝನ್ನು ಮರೆತುಬಿಟ್ಟರೆ ನೆನಪಾದಾಗ ಅದನ್ನು ನಿರ್ವಹಿಸಲಿ. ಇದಲ್ಲದೆ ಅದಕ್ಕೆ ಬೇರೆ ಪ್ರಾಯಶ್ಚಿತ್ತವಿಲ್ಲ...

ಅನಸ್ ಬಿನ್ ಮಾಲಿಕ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರಾದರೂ ನಮಾಝನ್ನು ಮರೆತುಬಿಟ್ಟರೆ ನೆನಪಾದಾಗ ಅದನ್ನು ನಿರ್ವಹಿಸಲಿ. ಇದಲ್ಲದೆ ಅದಕ್ಕೆ ಬೇರೆ ಪ್ರಾಯಶ್ಚಿತ್ತವಿಲ್ಲ. "ನನ್ನ ನೆನಪಿಗಾಗಿ ನಮಾಝ್ ನಿರ್ವಹಿಸಿರಿ." [ತ್ವಾಹಾ 14]"
متفق عليه

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಯಾರಾದರೂ ಕಡ್ಡಾಯ ನಮಾಝನ್ನು ನಿರ್ವಹಿಸಲು ಅದರ ಸಮಯವು ಮುಗಿಯುವ ತನಕ ಮರೆತುಬಿಟ್ಟರೆ, ಅದರ ನೆನಪಾದಾಗ ಅದನ್ನು ನಿರ್ವಹಿಸಲು ತ್ವರೆ ಮಾಡಲಿ. ಮರೆವಿನಿಂದಾಗಿ ನಮಾಝನ್ನು ತೊರೆದವರು ಆ ತಪ್ಪಿಗಾಗಿ ಅದು ನೆನಪಾದಾಗ ನಿರ್ವಹಿಸುವುದಲ್ಲದೆ ಅದಕ್ಕೆ ಬೇರೆ ಪರಿಹಾರವಿಲ್ಲ. ಅಲ್ಲಾಹು ಪವಿತ್ರ ಕುರ್‌ಆನಿನಲ್ಲಿ ಹೇಳುತ್ತಾನೆ: "ನನ್ನ ನೆನಪಿಗಾಗಿ ನಮಾಝ್ ನಿರ್ವಹಿಸಿರಿ." [ತ್ವಾಹಾ 14]. ಅಂದರೆ, ಮರೆತುಹೋದ ನಮಾಝನ್ನು ನೆನಪಾದಾಗ ನಿರ್ವಹಿಸಿರಿ."

Hadeeth benefits

  1. ನಮಾಝಿನ ಪ್ರಾಮುಖ್ಯತೆಯನ್ನು ಮತ್ತು ಅದನ್ನು ನಿರ್ವಹಿಸುವುದರಲ್ಲಿ ಅಸಡ್ಡೆ ತೋರಬಾರದೆಂದು ವಿವರಿಸಲಾಗಿದೆ.
  2. ಯಾವುದೇ ವಿನಾಯಿತಿಯಿಲ್ಲದಿದ್ದರೆ ನಮಾಝನ್ನು ಅದರ ಸಮಯಕ್ಕಿಂತ ಉದ್ದೇಶಪೂರ್ವಕವಾಗಿ ತಡಮಾಡಬಾರದು.
  3. ಮರೆತವರು ನೆನಪಾದಾಗ ಮತ್ತು ನಿದ್ದೆಯಲ್ಲಿರುವವರು ಎಚ್ಚರವಾದಾಗ ತಪ್ಪಿಹೋದ ನಮಾಝನ್ನು ನಿರ್ವಹಿಸುವುದು ಕಡ್ಡಾಯವಾಗಿದೆ.
  4. ತಪ್ಪಿಹೋದ ನಮಾಝನ್ನು ಆದಷ್ಟು ಬೇಗ ನಿರ್ವಹಿಸುವುದು ಕಡ್ಡಾಯವಾಗಿದೆ. ಅದು ನಮಾಝ್ ಮಾಡುವುದನ್ನು ನಿಷೇಧಿಸಲಾದ ಸಮಯದಲ್ಲಾಗಿದ್ದರೂ ಸಹ.