- ಅಸರ್ ನಮಾಝನ್ನು ಅದರ ಆರಂಭ ಸಮಯದಲ್ಲಿ ನಿರ್ವಹಿಸಲು ಮತ್ತು ಅದಕ್ಕಾಗಿ ಆತುರಪಡಲು ಈ ಹದೀಸ್ ಪ್ರೋತ್ಸಾಹಿಸುತ್ತದೆ.
- ಅಸರ್ ನಮಾಝನ್ನು ತೊರೆಯುವವರಿಗೆ ಈ ಹದೀಸಿನಲ್ಲಿ ಕಠೋರ ಎಚ್ಚರಿಕೆಯನ್ನು ನೀಡಲಾಗಿದೆ. ಅದನ್ನು ಅದರ ಸಮಯದಿಂದ ತಪ್ಪಿಸುವುದು ಇತರ ನಮಾಝ್‌ಗಳನ್ನು ಅವುಗಳ ಸಮಯದಿಂದ ತಪ್ಪಿಸುವುದಕ್ಕಿಂತಲೂ ದೊಡ್ಡ ಅಪರಾಧವಾಗಿದೆ. ಏಕೆಂದರೆ ಅದು ಮಧ್ಯಮ ನಮಾಝ್ ಆಗಿದ್ದು ಅಲ್ಲಾಹು ತನ್ನ ಆಜ್ಞೆಯ ಮೂಲಕ ಅದಕ್ಕೆ ವಿಶೇಷತೆ ನೀಡಿದ್ದಾನೆ: "ನೀವು ನಮಾಝ್‌ಗಳನ್ನು ಸಂರಕ್ಷಿಸಿರಿ; ವಿಶೇಷವಾಗಿ ಮಧ್ಯಮ ನಮಾಝನ್ನು." [ಬಕರ:238].