ಜುಂದುಬ್ ಬಿನ್ ಅಬ್ದುಲ್ಲಾ ಕಸ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಫಜ್ರ್ ನಮಾಝ್ ಮಾಡುವವನು ಅಲ್ಲಾಹನ ರಕ್ಷಣೆಯಲ್ಲಿದ್ದಾನೆ. ಆದ್ದರಿಂದ, ತನ್ನ ರಕ್ಷಣೆಯನ್ನು ಮುರಿದದ್ದಕ್ಕಾಗಿ ಅಲ್ಲಾಹು ನಿಮ್ಮನ್ನು ಪ್ರಶ್ನಿಸುವಂತೆ ಮಾಡಬೇಡಿ. ಏಕೆಂದರೆ, ತನ್ನ ರಕ್ಷಣೆಯನ್ನು ಮುರಿದದ್ದಕ್ಕಾಗಿ ಅಲ್ಲಾಹು ಯಾರನ್ನಾದರೂ ಪ್ರಶ್ನೆ ಮಾಡಿದರೆ ಅವನನ್ನು ಹಿಡಿದು ತಲೆಕೆಳಗಾಗಿ ನರಕಕ್ಕೆ ಎಸೆಯುತ್ತಾನೆ."
رواه مسلم
ವಿವರಣೆ
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿ ಇರಲಿ) ಇಲ್ಲಿ ತಿಳಿಸುವುದೇನೆಂದರೆ, ಫಜ್ರ್ ನಮಾಝ್ ಮಾಡಿದವನು ಅಲ್ಲಾಹನ ರಕ್ಷಣೆ ಮತ್ತು ಭದ್ರತೆಯಲ್ಲಿರುತ್ತಾನೆ; ಅಲ್ಲಾಹು ಅವನನ್ನು ರಕ್ಷಿಸುತ್ತಾನೆ ಮತ್ತು ಬೆಂಬಲಿಸುತ್ತಾನೆ.
ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ), ಫಜ್ರ್ ನಮಾಝನ್ನು ತೊರೆಯುವ ಮೂಲಕ ಅಥವಾ ಅದನ್ನು ನಿರ್ವಹಿಸಲು ಹೋಗುವವರಿಗೆ ಅಡ್ಡಿಪಡಿಸುವುದು ಅಥವಾ ಅವರ ಮೇಲೆ ಆಕ್ರಮಣ ಮಾಡುವುದು ಮುಂತಾದವುಗಳ ಮೂಲಕ ಈ ಕರಾರಿನಲ್ಲಿ ಕೊರತೆ ಮಾಡುವವರ ಮತ್ತು ಅದನ್ನು ಮುರಿಯುವವರ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ಹೀಗೆ ಮಾಡುವವರು ಈ ರಕ್ಷಣೆಯನ್ನು ಮುರಿದಿದ್ದಾರೆ ಮತ್ತು ಅಲ್ಲಾಹನ ವಿಷಯದಲ್ಲಿ ಕೊರತೆ ಮಾಡಿದವರನ್ನು ಅವನು ಪ್ರಶ್ನಿಸುತ್ತಾನೆ ಎಂಬ ಎಚ್ಚರಿಕೆಗೆ ಅರ್ಹರಾಗುತ್ತಾರೆ. ಅಲ್ಲಾಹು ಯಾರನ್ನಾದರೂ ಪ್ರಶ್ನಿಸಿದರೆ ಅವನು ಅವನನ್ನು ಹಿಡಿದು ತಲೆಕೆಳಗಾಗಿ ನರಕಕ್ಕೆ ಎಸೆಯುತ್ತಾನೆ.
Hadeeth benefits
ಫಜ್ರ್ ನಮಾಝ್‌ನ ಪ್ರಾಮುಖ್ಯತೆ ಮತ್ತು ಶ್ರೇಷ್ಠತೆಗಳನ್ನು ಈ ಹದೀಸ್ ವಿವರಿಸುತ್ತದೆ.
ಫಜ್ರ್ ನಮಾಝ್ ಮಾಡುವವರಿಗೆ ಅಡ್ಡಿಪಡಿಸುವುದರ ಬಗ್ಗೆ ಈ ಹದೀಸ್ ಕಠೋರ ಎಚ್ಚರಿಕೆ ನೀಡುತ್ತದೆ.
ತನ್ನ ಸಜ್ಜನ ದಾಸರಿಗೆ ಅಡ್ಡಿಪಡಿಸುವವರಿಂದ ಅಲ್ಲಾಹು ಪ್ರತೀಕಾರ ಪಡೆಯುತ್ತಾನೆಂದು ಈ ಹದೀಸ್ ತಿಳಿಸುತ್ತದೆ.
Share
Use the QR code to easily share the message of Islam with others