/ ಯಾರು ಎರಡು ಬರದ್ (ತಂಪು) ನಮಾಝ್‌ಗಳನ್ನು ನಿರ್ವಹಿಸುತ್ತಾರೋ ಅವರು ಸ್ವರ್ಗವನ್ನು ಪ್ರವೇಶಿಸುತ್ತಾರೆ

ಯಾರು ಎರಡು ಬರದ್ (ತಂಪು) ನಮಾಝ್‌ಗಳನ್ನು ನಿರ್ವಹಿಸುತ್ತಾರೋ ಅವರು ಸ್ವರ್ಗವನ್ನು ಪ್ರವೇಶಿಸುತ್ತಾರೆ

ಅಬೂ ಮೂಸಾ ಅಶ್‌ಅರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಯಾರು ಎರಡು ಬರದ್ (ತಂಪು) ನಮಾಝ್‌ಗಳನ್ನು ನಿರ್ವಹಿಸುತ್ತಾರೋ ಅವರು ಸ್ವರ್ಗವನ್ನು ಪ್ರವೇಶಿಸುತ್ತಾರೆ."
متفق عليه

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಎರಡು ಬರದ್ ನಮಾಝ್‌ಗಳನ್ನು ನಿರ್ವಹಿಸಲು ಪ್ರೋತ್ಸಾಹಿಸಿದ್ದಾರೆ. ಅವು ಫಜ್ರ್ ನಮಾಝ್ ಮತ್ತು ಅಸರ್ ನಮಾಝ್ ಆಗಿವೆ. ಯಾರು ಆ ನಮಾಝ್‌ಗಳನ್ನು ಅವುಗಳ ಸಮಯಗಳಲ್ಲಿ ಮತ್ತು ಸಾಮೂಹಿಕವಾಗಿ ನಿರ್ವಹಿಸುವ ಮೂಲಕ ಅವುಗಳ ಹಕ್ಕನ್ನು ಪೂರೈಸುತ್ತಾರೋ ಅವರು ಸ್ವರ್ಗವನ್ನು ಪ್ರವೇಶಿಸುತ್ತಾರೆಂಬ ಸುವಾರ್ತೆ ನೀಡಿದ್ದಾರೆ.

Hadeeth benefits

  1. ಫಜ್ರ್ ಮತ್ತು ಅಸರ್ ನಮಾಝ್‌ಗಳನ್ನು ಸರಿಯಾಗಿ ನಿರ್ವಹಿಸುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ. ಏಕೆಂದರೆ, ಫಜ್ರ್ ನಮಾಝ್ ಸವಿಯಾದ ನಿದ್ರೆಯ ಸಮಯದಲ್ಲಿ ಬರುತ್ತದೆ ಮತ್ತು ಅಸರ್ ನಮಾಝ್ ಮನುಷ್ಯನು ಕೆಲಸದಲ್ಲಿ ಮಗ್ನನಾಗಿರುವ ಸಮಯದಲ್ಲಿ ಬರುತ್ತದೆ. ಯಾರು ಆ ಎರಡು ನಮಾಝ್‌ಗಳನ್ನು ಸರಿಯಾಗಿ ನಿರ್ವಹಿಸುತ್ತಾರೋ ಅವರು ಉಳಿದ ನಮಾಝ್‌ಗಳನ್ನು ಸರಿಯಾಗಿ ನಿರ್ವಹಿಸುತ್ತಾರೆ ಎಂಬುದರಲ್ಲಿ ಅನುಮಾನವಿಲ್ಲ.
  2. ಫಜ್ರ್ ನಮಾಝ್ ಮತ್ತು ಅಸರ್ ನಮಾಝನ್ನು ಎರಡು ಬರದ್‌ಗಳೆಂದು ಕರೆಯಲಾಗಿರುವುದು ಏಕೆಂದರೆ, ಫಜ್ರ್ ನಮಾಝಿನ ಸಮಯದಲ್ಲಿ ರಾತ್ರಿಯ ತಂಪು ಇರುತ್ತದೆ ಮತ್ತು ಅಸರ್ ನಮಾಝಿನ ಸಮಯದಲ್ಲಿ ಹಗಲಿನ ತಂಪು ಇರುತ್ತದೆ. ಅದು ಬೇಸಿಗೆಯ ಸಮಯದಲ್ಲಾದರೂ ಸಹ ಅದಕ್ಕಿಂತ ಮೊದಲಿನ (ಝುಹರ್) ನಮಾಝ್‌ಗಿಂತಲೂ ಇದು ಹಗುರವಾಗಿರುತ್ತದೆ. ಅಥವಾ ಅತಿಯಾದ ಬಳಕೆಯಿಂದಾಗಿ ಈ ಹೆಸರು ಬಂದಿರಬಹುದು. ಸೂರ್ಯ ಮತ್ತು ಚಂದ್ರರನ್ನು 'ಕಮರಾನ್' (ಎರಡು ಚಂದ್ರಗಳು) ಎಂದು ಕರೆಯುವಂತೆ.