- ರಾತ್ರಿಯ ಕೊನೆಯ ಸಮಯದಲ್ಲಿ ಅಲ್ಲಾಹನನ್ನು ಸ್ಮರಿಸಲು ಮುಸಲ್ಮಾನರನ್ನು ಪ್ರೋತ್ಸಾಹಿಸಲಾಗಿದೆ.
- ದೇವಸ್ಮರಣೆ, ಪ್ರಾರ್ಥನೆ ಮತ್ತು ನಮಾಝನ್ನು ಅವಲಂಬಿಸಿ ಸಮಯಗಳ ಶ್ರೇಷ್ಠತೆಯಲ್ಲಿ ಹೆಚ್ಚು ಕಡಿಮೆಯಾಗುತ್ತದೆ.
- "ಅಲ್ಲಾಹು ದಾಸನಿಗೆ ಅತಿನಿಕಟನಾಗುವುದು" ಎಂಬ ಈ ವಚನ ಮತ್ತು "ದಾಸನು ಅಲ್ಲಾಹನಿಗೆ ಅತಿನಿಕಟನಾಗುವುದು ಅವನು ಸಾಷ್ಟಾಂಗ ಮಾಡುವಾಗ" ಎಂಬ ವಚನದ ನಡುವಿನ ವ್ಯತ್ಯಾಸವನ್ನು ವಿವರಿಸುತ್ತಾ ಮೀರಕ್ ಹೇಳಿದರು: "ಇಲ್ಲಿ ಅಲ್ಲಾಹು ದಾಸನಿಗೆ ಅತಿನಿಕಟವಾಗುವ ಸಮಯದ ಬಗ್ಗೆ, ಅಂದರೆ ರಾತ್ರಿಯ ಕೊನೆಯ ಮೂರನೇ ಭಾಗದ ಬಗ್ಗೆ ವಿವರಿಸಲಾಗಿದೆ. ಆದರೆ ಅಲ್ಲಿ ದಾಸನು ಅಲ್ಲಾಹನಿಗೆ ಅತಿನಿಕಟನಾಗುವ ಸ್ಥಿತಿಯ ಬಗ್ಗೆ, ಅಂದರೆ ಅವನು ಸಾಷ್ಟಾಂಗ ಮಾಡುತ್ತಿರುವ ಸ್ಥಿತಿಯ ಬಗ್ಗೆ ವಿವರಿಸಲಾಗಿದೆ."