- ನಮಾಝ್‌ನಲ್ಲಿ ಏಳು ಅಂಗಗಳ ಮೇಲೆ ಸುಜೂದ್ ಮಾಡುವುದು ಕಡ್ಡಾಯವಾಗಿದೆ.
- ನಮಾಝ್‌ನಲ್ಲಿ ಬಟ್ಟೆ ಹಾಗೂ ಕೂದಲನ್ನು ಕಟ್ಟುವುದು ಅಥವಾ ಮಡಚುವುದನ್ನು ಅಸಹ್ಯಪಡಲಾಗಿದೆ.
- ನಮಾಝ್ ಮಾಡುವಾಗ ತಟಸ್ಥತೆಯನ್ನು ಪಾಲಿಸುವುದು ಕಡ್ಡಾಯವಾಗಿದೆ. ಅದು ಹೇಗೆಂದರೆ, ಸಾಷ್ಟಾಂಗದ ಏಳು ಅಂಗಗಳನ್ನು ನೆಲದ ಮೇಲಿಟ್ಟು, ಝಿಕ್ರ್ (ಸ್ಮರಣೆ) ಗಳೆಲ್ಲವನ್ನೂ ಪಠಿಸುವ ತನಕ ಹಾಗೆಯೇ ತಟಸ್ಥವಾಗಿರುವುದು.
- ಕೂದಲನ್ನು ಕಟ್ಟಬಾರದೆಂಬ ಆಜ್ಞೆಯು ವಿಶೇಷವಾಗಿ ಪುರುಷರಿಗೆ ಮಾತ್ರ ಅನ್ವಯವಾಗುತ್ತದೆ. ಮಹಿಳೆಯರು ನಮಾಝ್ ಮಾಡುವಾಗ ಕೂದಲನ್ನು ಸಂಪೂರ್ಣವಾಗಿ ಮುಚ್ಚಬೇಕಾಗಿದೆ.