ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ನಾನು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝನ್ನು ಅವರು ನಿರ್ವಹಿಸಿದಂತೆಯೇ ನಿರ್ವಹಿಸಿ ತೋರಿಸುತ್ತಿದ್ದೇನೆ. ಅವರು ಇಹಲೋಕಕ್ಕೆ ವಿದಾಯ ಹೇಳುವ ತನಕ ಅವರ ನಮಾಝ್ ಹೀಗೆಯೇ ಇತ್ತು...
ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅವರು ಕಡ್ಡಾಯ ಮತ್ತು ಐಚ್ಛಿಕವಾದ ಎಲ್ಲಾ ನಮಾಝ್‌ಗಳಲ್ಲೂ ತಕ್ಬೀರ್ ಹೇಳುತ್ತಿದ್ದರು. ರಮದಾನ್ ತಿಂಗಳಲ್ಲೂ ಇತರ ತಿಂಗಳಲ್ಲೂ ಕೂಡ. ಅವರು ನಮಾಝ್‌ಗಾಗಿ ನಿಲ್ಲುವಾಗ ತಕ್ಬೀರ್ ಹೇಳುತ್ತಿದ್ದರು. ನಂತರ ರುಕೂ ಮಾಡುವಾಗ ತಕ್ಬೀರ್ ಹೇಳುತ್ತಿದ್ದರು. ನಂತರ, "ಸಮಿಅಲ್ಲಾಹು ಲಿಮನ್ ಹಮಿದ" ಎಂದು ಹೇಳುತ್ತಿದ್ದರು. ನಂತರ ಸುಜೂದ್ ಮಾಡುವುದಕ್ಕೆ ಮೊದಲು "ರಬ್ಬನಾ ವಲಕಲ್ ಹಮ್ದ್" ಎಂದು ಹೇಳುತ್ತಿದ್ದರು. ನಂತರ ಸುಜೂದ್ ಮಾಡುವಾಗ "ಅಲ್ಲಾಹು ಅಕ್ಬರ್" ಎಂದು ಹೇಳುತ್ತಿದ್ದರು. ನಂತರ ಸುಜೂದ್‌ನಿಂದ ತಲೆಯೆತ್ತುವಾಗ ತಕ್ಬೀರ್ ಹೇಳುತ್ತಿದ್ದರು. ನಂತರ ಪುನಃ ಸುಜೂದ್ ಮಾಡುವಾಗ ತಕ್ಬೀರ್ ಹೇಳುತ್ತಿದ್ದರು. ನಂತರ ಸುಜೂದ್‌ನಿಂದ ತಲೆಯೆತ್ತುವಾಗ ತಕ್ಬೀರ್ ಹೇಳುತ್ತಿದ್ದರು. ನಂತರ ಎರಡನೇ ರಕಅತ್‌ಗಾಗಿ ಏಳುವಾಗ ತಕ್ಬೀರ್ ಹೇಳುತ್ತಿದ್ದರು. ಅವರು ನಮಾಝ್ ಮುಗಿಯುವ ತನಕ ಎಲ್ಲಾ ರಕಅತ್‌ಗಳಲ್ಲೂ ಹೀಗೆಯೇ ಮಾಡುತ್ತಿದ್ದರು. ನಮಾಝ್ ಮುಗಿಸಿದ ನಂತರ ಅವರು ಹೇಳುತ್ತಿದ್ದರು: "ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ನಾನು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝನ್ನು ಅವರು ನಿರ್ವಹಿಸಿದಂತೆಯೇ ನಿರ್ವಹಿಸಿ ತೋರಿಸುತ್ತಿದ್ದೇನೆ. ಅವರು ಇಹಲೋಕಕ್ಕೆ ವಿದಾಯ ಹೇಳುವ ತನಕ ಅವರ ನಮಾಝ್ ಹೀಗೆಯೇ ಇತ್ತು."
متفق عليه
ವಿವರಣೆ
ಅಬೂ ಹುರೈರ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝಿನ ಒಂದು ಭಾಗವನ್ನು ವರದಿ ಮಾಡುತ್ತಿದ್ದಾರೆ. ಅವರು ತಿಳಿಸಿದಂತೆ, ಅವರು ನಮಾಝ್‌ಗಾಗಿ ನಿಲ್ಲುವಾಗ ಅಲ್ಲಾಹು ಅಕ್ಬರ್ ಎಂದು ಪ್ರಾರಂಭದ ತಕ್ಬೀರ್ ಹೇಳುತ್ತಿದ್ದರು. ನಂತರ ರುಕೂಗೆ ಹೋಗುವಾಗ ಮತ್ತು ಸುಜೂದ್‌ಗೆ ಹೋಗುವಾಗ ತಕ್ಬೀರ್ ಹೇಳುತ್ತಿದ್ದರು. ಸುಜೂದ್‌ನಿಂದ ತಲೆಯೆತ್ತುವಾಗ ತಕ್ಬೀರ್ ಹೇಳುತ್ತಿದ್ದರು. ಎರಡನೇ ಸುಜೂದ್ ಮಾಡುವಾಗ ತಕ್ಬೀರ್ ಹೇಳುತ್ತಿದ್ದರು. ಎರಡನೇ ಸುಜೂದ್‌ನಿಂದ ತಲೆಯೆತ್ತುವಾಗ ತಕ್ಬೀರ್ ಹೇಳುತ್ತಿದ್ದರು. ಮೂರು ಮತ್ತು ನಾಲ್ಕು ರಕಅತ್‌ಗಳ ನಮಾಝ್‌ಗಳಲ್ಲಿ ಎರಡು ರಕಅತ್ ನಿರ್ವಹಿಸಿ ಮೂರನೇ ರಕಅತ್‌ಗೆ ಎದ್ದೇಳುವಾಗ ತಕ್ಬೀರ್ ಹೇಳುತ್ತಿದ್ದರು. ನಂತರ ಇವೆಲ್ಲವನ್ನೂ ನಮಾಝಿನ ಎಲ್ಲಾ ರಕಅತ್‌ಗಳಲ್ಲೂ ನಿರ್ವಹಿಸುತ್ತಿದ್ದರು. ರುಕೂನಿಂದ ತಲೆಯೆತ್ತುವಾಗ, "ಸಮಿಅಲ್ಲಾಹು ಲಿಮನ್ ಹಮಿದ" ಎಂದು ಹೇಳುತ್ತಿದ್ದರು. ಎದ್ದು ನಿಂತ ನಂತರ "ರಬ್ಬನಾ ವಲಕಲ್ ಹಮ್ದ್" ಎಂದು ಹೇಳುತ್ತಿದ್ದರು.
ನಂತರ ನಮಾಝ್ ಮುಗಿಸಿದ ನಂತರ ಅಬೂ ಹುರೈರ ಹೇಳುತ್ತಿದ್ದರು: "ನನ್ನ ಆತ್ಮ ಯಾರ ಕೈಯಲ್ಲಿದೆಯೋ ಅವನ ಮೇಲಾಣೆ! ನಾನು ಅಲ್ಲಾಹನ ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝನ್ನು ಅವರು ನಿರ್ವಹಿಸಿದಂತೆಯೇ ನಿರ್ವಹಿಸಿ ತೋರಿಸುತ್ತಿದ್ದೇನೆ. ಅವರು ಇಹಲೋಕಕ್ಕೆ ವಿದಾಯ ಹೇಳುವ ತನಕ ಅವರ ನಮಾಝ್ ಹೀಗೆಯೇ ಇತ್ತು."
Hadeeth benefits
ರುಕೂವಿನಿಂದ ಎದ್ದೇಳುವಾಗ ಹೊರತು ನಮಾಝ್‌ನಲ್ಲಿ ಏಳುವ ಮತ್ತು ಬಾಗುವ ಎಲ್ಲಾ ಸಂದರ್ಭಗಳಲ್ಲೂ ತಕ್ಬೀರ್ ಹೇಳಬೇಕಾಗಿದೆ.
ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಕರಿಸಲು ಮತ್ತು ಅವರ ಚರ್ಯೆಯನ್ನು ಸಂರಕ್ಷಿಸಲು ಸಹಾಬಿಗಳು ತೋರುತ್ತಿದ್ದ ಉತ್ಸಾಹವನ್ನು ವಿವರಿಸಲಾಗಿದೆ.
Share
Use the QR code to easily share the message of Islam with others