- ಗಟ್ಟಿಯಾಗಿ ಪಠಿಸುವ ನಮಾಝ್ ಆಗಿದ್ದರೂ ಸಹ, ಪ್ರಾರಂಭದ ಪ್ರಾರ್ಥನೆಯನ್ನು ಮೌನವಾಗಿ ಪಠಿಸಬೇಕಾಗಿದೆ.
- ಸಂದೇಶವಾಹಕರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಚಲ ಮತ್ತು ನಿಶ್ಚಲವಾದ ಎಲ್ಲಾ ಅವಸ್ಥೆಗಳನ್ನು ಅರಿಯಲು ಸಹಾಬಿಗಳಿಗಿದ್ದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಉತ್ಸಾಹವನ್ನು ತಿಳಿಸಲಾಗಿದೆ.
- ಪ್ರಾರಂಭದ ಪ್ರಾರ್ಥನೆಯ ಇತರ ರೂಪಗಳು ಕೂಡ ವರದಿಯಾಗಿವೆ. ಪ್ರವಾದಿಯವರಿಂದ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಧಿಕೃತವಾಗಿ ವರದಿಯಾದ ಪ್ರಾರಂಭದ ಪ್ರಾರ್ಥನೆಗಳ ಎಲ್ಲಾ ರೂಪಗಳನ್ನು ಅನುಸರಿಸುವುದು ಮತ್ತು ಒಂದೊಂದು ಸಲ ಒಂದೊಂದು ರೂಪವನ್ನು ಪಠಿಸುವುದು ಶ್ರೇಷ್ಠವಾಗಿದೆ.