/ ನಮಾಝ್ ನಮ್ಮ ಮತ್ತು ಅವರ (ಸತ್ಯನಿಷೇಧಿಗಳ) ನಡುವಿನ ಒಪ್ಪಂದವಾಗಿದೆ. ಯಾರು ಅದನ್ನು ತೊರೆಯುತ್ತಾರೋ ಅವರು ಸತ್ಯನಿಷೇಧಿಗಳಾದರು...

ನಮಾಝ್ ನಮ್ಮ ಮತ್ತು ಅವರ (ಸತ್ಯನಿಷೇಧಿಗಳ) ನಡುವಿನ ಒಪ್ಪಂದವಾಗಿದೆ. ಯಾರು ಅದನ್ನು ತೊರೆಯುತ್ತಾರೋ ಅವರು ಸತ್ಯನಿಷೇಧಿಗಳಾದರು...

ಬುರೈದ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಮಾಝ್ ನಮ್ಮ ಮತ್ತು ಅವರ (ಸತ್ಯನಿಷೇಧಿಗಳ) ನಡುವಿನ ಒಪ್ಪಂದವಾಗಿದೆ. ಯಾರು ಅದನ್ನು ತೊರೆಯುತ್ತಾರೋ ಅವರು ಸತ್ಯನಿಷೇಧಿಗಳಾದರು."
رواه الترمذي والنسائي وابن ماجه وأحمد

ವಿವರಣೆ

ಮುಸ್ಲಿಮರ ಮತ್ತು ಮುಸ್ಲಿಮೇತರರ (ಸತ್ಯನಿಷೇಧಿಗಳು ಮತ್ತು ಕಪಟವಿಶ್ವಾಸಿಗಳು) ನಡುವಿನ ಒಪ್ಪಂದ ಮತ್ತು ಕರಾರು ನಮಾಝ್ ಆಗಿದ್ದು, ಯಾರು ಅದನ್ನು ತೊರೆಯುತ್ತಾರೋ ಅವರು ಸತ್ಯನಿಷೇಧಿಗಳಾಗುತ್ತಾರೆಂದು ಪ್ರವಾದಿಯವರು (ಅವರ ಮೇಲೆ ಶಾಂತಿಯಿರಲಿ) ಇಲ್ಲಿ ವಿವರಿಸಿದ್ದಾರೆ.

Hadeeth benefits

  1. ನಮಾಝಿನ ಶ್ರೇಷ್ಠ ಸ್ಥಾನಮಾನವನ್ನು ಮತ್ತು ಅದು ಸತ್ಯವಿಶ್ವಾಸಿ ಮತ್ತು ಸತ್ಯನಿಷೇಧಿಗಳನ್ನು ಬೇರ್ಪಡಿಸುತ್ತದೆಂದು ತಿಳಿಸಲಾಗಿದೆ.
  2. ಇಸ್ಲಾಮೀ ಕಾನೂನುಗಳನ್ನು ಜಾರಿಗೊಳಿಸಲಾಗುವುದು ಮನುಷ್ಯನ ಬಾಹ್ಯ ಸ್ಥಿತಿಯನ್ನು ನೋಡಿಯೇ ಹೊರತು ಅವನ ಅಂತರಂಗವನ್ನು ನೋಡಿ ಅಲ್ಲ.