- ಸೂರ ಫಾತಿಹಕ್ಕೆ ಶ್ರೇಷ್ಠ ಸ್ಥಾನಮಾನವಿದೆ. ಅಲ್ಲಾಹು ಅದನ್ನು "ಸ್ವಲಾತ್" ಎಂದು ಕರೆದಿದ್ದಾನೆ.
- ದಾಸನ ಬಗ್ಗೆ ಅಲ್ಲಾಹನಿಗಿರುವ ಕಾಳಜಿಯನ್ನು ತಿಳಿಸಲಾಗಿದೆ. ದಾಸನು ಅವನನ್ನು ಸ್ತುತಿಸಿದ್ದನ್ನು, ಅವನನ್ನು ಪ್ರಶಂಸಿಸಿ ಮಹತ್ವಪಡಿಸಿದ್ದನ್ನು ಅಲ್ಲಾಹು ಹೊಗಳಿದ್ದಾನೆ ಮತ್ತು ದಾಸನು ಬೇಡಿದ್ದನ್ನು ನೀಡುವ ವಾಗ್ದಾನ ಮಾಡಿದ್ದಾನೆ.
- ಈ ಪವಿತ್ರ ಅಧ್ಯಾಯವು ಅಲ್ಲಾಹನ ಸ್ತುತಿ, ಪರಲೋಕ ಸ್ಮರಣೆ, ಅಲ್ಲಾಹನಲ್ಲಿ ಪ್ರಾರ್ಥನೆ, ಅಲ್ಲಾಹನಿಗೆ ಆರಾಧನೆಗಳನ್ನು ನಿಷ್ಕಳಂಕಗೊಳಿಸುವುದು, ಅಲ್ಲಾಹನಲ್ಲಿ ನೇರ ಮಾರ್ಗಕ್ಕೆ ಸಾಗಿಸಲು ಸನ್ಮಾರ್ಗವನ್ನು ಬೇಡುವುದು, ತಪ್ಪು ದಾರಿಗಳ ಬಗ್ಗೆ ಎಚ್ಚರಿಕೆ ಮುಂತಾದವುಗಳನ್ನು ಒಳಗೊಂಡಿದೆ.
- ದಾಸನು ಸೂರ ಫಾತಿಹ ಪಠಿಸುವಾಗ ಈ ಹದೀಸನ್ನು ನೆನಪಿಸಿಕೊಂಡರೆ ನಮಾಝಿನಲ್ಲಿ ಅವನ ಭಯಭಕ್ತಿಯು ಹೆಚ್ಚಾಗಬಹುದು.