/ ಮಕ್ಕಳಿಗೆ ಏಳು ವರ್ಷ ಪ್ರಾಯವಾದಾಗ ನಮಾಝ್ ನಿರ್ವಹಿಸಲು ಆದೇಶಿಸಿರಿ, ಹತ್ತು ವರ್ಷ ಪ್ರಾಯವಾದಾಗ ಅದಕ್ಕಾಗಿ ಹೊಡೆಯಿರಿ ಮತ್ತು ಮಲಗುವ ಸ್ಥಳದಲ್ಲಿ ಅವರನ್ನು ಬೇರ್ಪಡಿಸಿರಿ...

ಮಕ್ಕಳಿಗೆ ಏಳು ವರ್ಷ ಪ್ರಾಯವಾದಾಗ ನಮಾಝ್ ನಿರ್ವಹಿಸಲು ಆದೇಶಿಸಿರಿ, ಹತ್ತು ವರ್ಷ ಪ್ರಾಯವಾದಾಗ ಅದಕ್ಕಾಗಿ ಹೊಡೆಯಿರಿ ಮತ್ತು ಮಲಗುವ ಸ್ಥಳದಲ್ಲಿ ಅವರನ್ನು ಬೇರ್ಪಡಿಸಿರಿ...

ಅಮ್ರ್ ಬಿನ್ ಶುಐಬ್ ರಿಂದ, ಅವರು ಅವರ ತಂದೆಯಿಂದ, ಅವರು ಅವರ ತಾತನಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮಕ್ಕಳಿಗೆ ಏಳು ವರ್ಷ ಪ್ರಾಯವಾದಾಗ ನಮಾಝ್ ನಿರ್ವಹಿಸಲು ಆದೇಶಿಸಿರಿ, ಹತ್ತು ವರ್ಷ ಪ್ರಾಯವಾದಾಗ ಅದಕ್ಕಾಗಿ ಹೊಡೆಯಿರಿ ಮತ್ತು ಮಲಗುವ ಸ್ಥಳದಲ್ಲಿ ಅವರನ್ನು ಬೇರ್ಪಡಿಸಿರಿ."
رواه أبو داود

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಮಕ್ಕಳಿಗೆ—ಅವರು ಗಂಡಾದರೂ ಹೆಣ್ಣಾದರೂ—ಏಳು ವರ್ಷವಾದರೆ ನಮಾಝ್ ಮಾಡಲು ಆದೇಶಿಸುವುದು ಮತ್ತು ನಮಾಝ್ ಸಂಸ್ಥಾಪನೆಗೆ ಅಗತ್ಯವಾದ ವಿಷಯಗಳನ್ನು ಕಲಿಸಿಕೊಡುವುದು ತಂದೆಯ ಕಡ್ಡಾಯ ಕರ್ತವ್ಯವಾಗಿದೆ. ಹತ್ತು ವರ್ಷವಾದರೆ ಆದೇಶವನ್ನು ತೀವ್ರಗೊಳಿಸಬೇಕು ಮತ್ತು ನಮಾಝ್ ಮಾಡಲು ನಿರ್ಲಕ್ಷ್ಯ ತೋರಿದರೆ ಹೊಡೆಯಬೇಕು ಹಾಗೂ ಅವರನ್ನು ಬೇರೆ ಬೇರೆಯಾಗಿ ಮಲಗಿಸಬೇಕು.

Hadeeth benefits

  1. ಮಕ್ಕಳು ಪ್ರಾಯಕ್ಕೆ ತಲುಪುವುದಕ್ಕೆ ಮೊದಲೇ ಅವರಿಗೆ ಧಾರ್ಮಿಕ ವಿಷಯಗಳನ್ನು, ಪ್ರಮುಖವಾಗಿ ನಮಾಝ್ ನಿರ್ವಹಿಸುವುದನ್ನು ಕಲಿಸಬೇಕೆಂದು ತಿಳಿಸಲಾಗಿದೆ.
  2. ಹೊಡೆಯುವುದು ಶಿಸ್ತಿಗೆ ಮಾತ್ರವಾಗಿರಬೇಕೇ ವಿನಾ ಶಿಕ್ಷೆಗಾಗಿರಬಾರದು. ಮಗುವಿನ ಪ್ರಾಯ ಮತ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಹೊಡೆಯಬೇಕು.
  3. ಇಸ್ಲಾಮಿ ಧರ್ಮಶಾಸ್ತ್ರವು ಘನತೆ-ಗೌರವಗಳ ಸಂರಕ್ಷಣೆಗೆ ಅತಿಯಾದ ಕಾಳಜಿಯನ್ನು ತೋರಿದೆ ಮತ್ತು ಗೌರವಚ್ಯುತಿಗೆ ಕಾರಣವಾಗುವ ಎಲ್ಲಾ ಮಾರ್ಗಗಳನ್ನು ಮುಚ್ಚಿದೆ.