- ಪಾಪಗಳಲ್ಲಿ ಕಿರುಪಾಪಗಳು ಮತ್ತು ಮಹಾಪಾಪಗಳಿವೆ ಎಂಬುದನ್ನು ಈ ಹದೀಸ್ ತಿಳಿಸುತ್ತದೆ.
- ಕಿರುಪಾಪಗಳು ಪರಿಹಾರವಾಗಬೇಕಾದರೆ ಮಹಾ ಪಾಪಗಳಿಂದ ದೂರವಿರಬೇಕಾದ ಷರತ್ತು ಇದೆ.
- ವ್ಯಭಿಚಾರ, ಮದ್ಯಪಾನ ಮುಂತಾದ ಇಹಲೋಕದಲ್ಲೇ ಶಿಕ್ಷೆ ನಿಗದಿಪಡಿಸಲಾದ, ಅಥವಾ ಪರಲೋಕದಲ್ಲಿ ಉಗ್ರ ಶಿಕ್ಷೆಯಿದೆಯೆಂದು, ಅಥವಾ ಅಲ್ಲಾಹನ ಕೋಪಕ್ಕೆ ಗುರಿಯಾಗಬೇಕಾದೀತೆಂದು ಎಚ್ಚರಿಸಲಾದ, ಅಥವಾ ಅದರ ಬಗ್ಗೆ ಬೆದರಿಸಲಾದ, ಅಥವಾ ಅದನ್ನು ಮಾಡುವವನನ್ನು ಶಪಿಸಲಾದ ಪಾಪಗಳೆಲ್ಲವೂ ಮಹಾಪಾಪಗಳಾಗಿವೆ.