/ ಒಬ್ಬ ಮುಸಲ್ಮಾನನು ಕಡ್ಡಾಯ ನಮಾಝ್‌ನ ಸಮಯವಾದಾಗ ಸರಿಯಾಗಿ ವುದೂ ನಿರ್ವಹಿಸಿ, ಪೂರ್ಣ ಭಕ್ತಿಯಿಂದ ಮತ್ತು ರುಕೂ (ಬಾಗುವುದು) ಅನ್ನು ಸರಿಯಾಗಿ ಪೂರ್ಣಗೊಳಿಸುತ್ತಾ ನಮಾಝ್ ನಿರ್ವಹಿಸಿದರೆ, ಅದು ಅವನ ಗತ ಪಾಪಗಳಿಗೆ ಪ್ರಾಯಶ್ಚಿತ್ತವಾಗುತ್ತದೆ—ಅವು ಮಹಾಪಾಪಗಳಲ್ಲದಿದ್ದರೆ. ಇದು ಎಲ್ಲಾ ಕಾಲಕ್ಕೂ ಅನ್ವ...

ಒಬ್ಬ ಮುಸಲ್ಮಾನನು ಕಡ್ಡಾಯ ನಮಾಝ್‌ನ ಸಮಯವಾದಾಗ ಸರಿಯಾಗಿ ವುದೂ ನಿರ್ವಹಿಸಿ, ಪೂರ್ಣ ಭಕ್ತಿಯಿಂದ ಮತ್ತು ರುಕೂ (ಬಾಗುವುದು) ಅನ್ನು ಸರಿಯಾಗಿ ಪೂರ್ಣಗೊಳಿಸುತ್ತಾ ನಮಾಝ್ ನಿರ್ವಹಿಸಿದರೆ, ಅದು ಅವನ ಗತ ಪಾಪಗಳಿಗೆ ಪ್ರಾಯಶ್ಚಿತ್ತವಾಗುತ್ತದೆ—ಅವು ಮಹಾಪಾಪಗಳಲ್ಲದಿದ್ದರೆ. ಇದು ಎಲ್ಲಾ ಕಾಲಕ್ಕೂ ಅನ್ವ...

ಉಸ್ಮಾನ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ: "ಒಬ್ಬ ಮುಸಲ್ಮಾನನು ಕಡ್ಡಾಯ ನಮಾಝ್‌ನ ಸಮಯವಾದಾಗ ಸರಿಯಾಗಿ ವುದೂ ನಿರ್ವಹಿಸಿ, ಪೂರ್ಣ ಭಕ್ತಿಯಿಂದ ಮತ್ತು ರುಕೂ (ಬಾಗುವುದು) ಅನ್ನು ಸರಿಯಾಗಿ ಪೂರ್ಣಗೊಳಿಸುತ್ತಾ ನಮಾಝ್ ನಿರ್ವಹಿಸಿದರೆ, ಅದು ಅವನ ಗತ ಪಾಪಗಳಿಗೆ ಪ್ರಾಯಶ್ಚಿತ್ತವಾಗುತ್ತದೆ—ಅವು ಮಹಾಪಾಪಗಳಲ್ಲದಿದ್ದರೆ. ಇದು ಎಲ್ಲಾ ಕಾಲಕ್ಕೂ ಅನ್ವಯಿಸುತ್ತದೆ.";
رواه مسلم

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ವಿವರಿಸುವುದೇನೆಂದರೆ, ಒಬ್ಬ ಮುಸಲ್ಮಾನನು ಕಡ್ಡಾಯ ನಮಾಝ್‌ನ ಸಮಯವಾದಾಗ, ಅತ್ಯುತ್ತಮ ರೂಪದಲ್ಲಿ ಪೂರ್ಣವಾಗಿ ವುದೂ ನಿರ್ವಹಿಸಿ, ತನ್ನ ಹೃದಯ ಮತ್ತು ಅಂಗಗಳು ಅಲ್ಲಾಹನನ್ನು ಮಾತ್ರ ನೆನಪಿಸಿಕೊಳ್ಳುವ ರೀತಿಯಲ್ಲಿ ಭಯ-ಭಕ್ತಿಯಿಂದ, ನಮಾಝ್‌ನ ಕ್ರಿಯೆಗಳಾದ ಬಾಗುವುದು, ಸಾಷ್ಟಾಂಗ ಮಾಡುವುದು ಮುಂತಾದವುಗಳನ್ನು ಪೂರ್ಣ ರೂಪದಲ್ಲಿ ನಿರ್ವಹಿಸಿದರೆ, ಈ ನಮಾಝ್ ಅವನು ಇದಕ್ಕೆ ಮೊದಲು ಎಸಗಿದ ಸಣ್ಣ ಪಾಪಗಳಿಗೆ ಪರಿಹಾರವಾಗುತ್ತದೆ. ಅವನು ಮಹಾಪಾಪಗಳಲ್ಲಿ ಯಾವುದಾದರೂ ಒಂದನ್ನು ಎಸಗಿರದಿದ್ದರೆ. ಈ ಶ್ರೇಷ್ಠತೆಯು ಎಲ್ಲಾ ಕಾಲಗಳಿಗೂ ಮತ್ತು ಎಲ್ಲಾ ನಮಾಝ್‌ಗಳಿಗೂ ಅನ್ವಯಿಸುತ್ತದೆ.

Hadeeth benefits

  1. ಪಾಪಗಳನ್ನು ಪರಿಹರಿಸುವ ನಮಾಝ್ ಯಾವುದೆಂದರೆ, ದಾಸನು ಅತ್ಯುತ್ತಮವಾಗಿ ವುದೂ ನಿರ್ವಹಿಸಿ, ಅಲ್ಲಾಹನ ಸಂಪ್ರೀತಿಯನ್ನು ಮಾತ್ರ ಉದ್ದೇಶಿಸಿ ಭಕ್ತಿಯಿಂದ ನಿರ್ವಹಿಸಿದ ನಮಾಝ್.
  2. ಆರಾಧನೆಗಳನ್ನು ಚಾಚೂ ತಪ್ಪದೆ ನಿರ್ವಹಿಸುವುದು ಶ್ರೇಷ್ಠತೆಯನ್ನು ಮತ್ತು ಅದು ಸಣ್ಣ ಪಾಪಗಳ ಕ್ಷಮೆಗೆ ಕಾರಣವಾಗುತ್ತದೆ ಎಂದು ತಿಳಿಸಲಾಗಿದೆ.
  3. ಅತ್ಯುತ್ತಮವಾಗಿ ವುದೂ ನಿರ್ವಹಿಸುವುದು ಮತ್ತು ಅತ್ಯುತ್ತಮವಾಗಿ ಮತ್ತು ಭಕ್ತಿಯಿಂದ ನಮಾಝ್ ನಿರ್ವಹಿಸುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ.
  4. ಸಣ್ಣ ಪಾಪಗಳನ್ನು ಕ್ಷಮಿಸಬೇಕಾದರೆ ಮಹಾಪಾಪಗಳಿಂದ ದೂರವಿರಬೇಕಾದ ಪ್ರಾಮುಖ್ಯತೆಯನ್ನು ತಿಳಿಸಲಾಗಿದೆ.
  5. ಮಹಾಪಾಪಗಳು ತೌಬಾ (ಪಶ್ಚಾತ್ತಾಪ) ದಿಂದಲ್ಲದೆ ಪರಿಹಾರವಾಗುವುದಿಲ್ಲ.