/ ಅಲ್ಲಾಹು ಅತ್ಯಂತ ಇಷ್ಟಪಡುವ ಕರ್ಮ ಯಾವುದು?” ಅವರು ಉತ್ತರಿಸಿದರು: “ನಮಾಝನ್ನು ಅದರ ಸಮಯದಲ್ಲಿ ನಿರ್ವಹಿಸುವುದು.” ನಾನು ಕೇಳಿದೆ: “ನಂತರ ಯಾವುದು?” ಅವರು ಉತ್ತರಿಸಿದರು: “ನಂತರ ಮಾತಾಪಿತರಿಗೆ ಒಳಿತು ಮಾಡುವುದು.” ನಾನು ಕೇಳಿದೆ: “ನಂತರ ಯಾವುದು?” ಅವರು ಉತ್ತರಿಸಿದರು: “ಅಲ್ಲಾಹನ ಮಾರ್ಗದಲ್ಲ...

ಅಲ್ಲಾಹು ಅತ್ಯಂತ ಇಷ್ಟಪಡುವ ಕರ್ಮ ಯಾವುದು?” ಅವರು ಉತ್ತರಿಸಿದರು: “ನಮಾಝನ್ನು ಅದರ ಸಮಯದಲ್ಲಿ ನಿರ್ವಹಿಸುವುದು.” ನಾನು ಕೇಳಿದೆ: “ನಂತರ ಯಾವುದು?” ಅವರು ಉತ್ತರಿಸಿದರು: “ನಂತರ ಮಾತಾಪಿತರಿಗೆ ಒಳಿತು ಮಾಡುವುದು.” ನಾನು ಕೇಳಿದೆ: “ನಂತರ ಯಾವುದು?” ಅವರು ಉತ್ತರಿಸಿದರು: “ಅಲ್ಲಾಹನ ಮಾರ್ಗದಲ್ಲ...

ಅಬ್ದುಲ್ಲಾ ಬಿನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ನಾನು ಪ್ರವಾದಿ(ಸ) ರೊಂದಿಗೆ ಕೇಳಿದೆ: “ಅಲ್ಲಾಹು ಅತ್ಯಂತ ಇಷ್ಟಪಡುವ ಕರ್ಮ ಯಾವುದು?” ಅವರು ಉತ್ತರಿಸಿದರು: “ನಮಾಝನ್ನು ಅದರ ಸಮಯದಲ್ಲಿ ನಿರ್ವಹಿಸುವುದು.” ನಾನು ಕೇಳಿದೆ: “ನಂತರ ಯಾವುದು?” ಅವರು ಉತ್ತರಿಸಿದರು: “ನಂತರ ಮಾತಾಪಿತರಿಗೆ ಒಳಿತು ಮಾಡುವುದು.” ನಾನು ಕೇಳಿದೆ: “ನಂತರ ಯಾವುದು?” ಅವರು ಉತ್ತರಿಸಿದರು: “ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದು.” ಇಬ್ನ್ ಮಸ್‌ಊದ್ ಹೇಳುತ್ತಾರೆ: "ಇವೆಲ್ಲವೂ ಅವರು ತಿಳಿಸಿದ್ದಾಗಿದೆ. ಒಂದು ವೇಳೆ ನಾನು ಇನ್ನೂ ಕೇಳುತ್ತಾ ಹೋದರೆ ಅವರು ಇನ್ನೂ ಉತ್ತರಿಸುತ್ತಿದ್ದರು."
متفق عليه

ವಿವರಣೆ

ಪ್ರವಾದಿಯವರೊಡನೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) “ಅಲ್ಲಾಹು ಅತ್ಯಂತ ಇಷ್ಟಪಡುವ ಕರ್ಮ ಯಾವುದು?” ಎಂದು ಕೇಳಲಾಯಿತು. ಆಗ ಅವರು ಉತ್ತರಿಸಿದರು: "ಅಲ್ಲಾಹು ನಿಗದಿಗೊಳಿಸಿದ ಸಮಯದಲ್ಲಿ ಕಡ್ಡಾಯ ನಮಾಝ್‌ಗಳನ್ನು ನಿರ್ವಹಿಸುವುದು." ನಂತರ ತಂದೆ-ತಾಯಿಗೆ ಒಳಿತು ಮಾಡುವುದು. ಅಂದರೆ, ಅವರೊಡನೆ ಉತ್ತಮವಾಗಿ ವರ್ತಿಸುವುದು, ಅವರ ಅಗತ್ಯಗಳನ್ನು ಪೂರೈಸುವುದು ಮತ್ತು ಅವರಿಗೆ ಅವಿಧೇಯತೆ ತೋರದಿರುವುದು. ನಂತರ ಅಲ್ಲಾಹನ ಮಾರ್ಗದಲ್ಲಿ ಜಿಹಾದ್ ಮಾಡುವುದು. ಅಂದರೆ, ಅಲ್ಲಾಹನ ವಚನವು ಉನ್ನತವಾಗಲು, ಇಸ್ಲಾಂ ಧರ್ಮ ಮತ್ತು ಅದರ ಅನುಯಾಯಿಗಳನ್ನು ರಕ್ಷಿಸಲು ಮತ್ತು ಅದರ ಚಿಹ್ನೆಗಳನ್ನು ಪ್ರಕಟಗೊಳಿಸಲು ಯುದ್ಧ ಮಾಡುವುದು. ಇದನ್ನು ದೈಹಿಕವಾಗಿ ಮತ್ತು ಆರ್ಥಿಕವಾಗಿ ನಿರ್ವಹಿಸಬಹುದು. ಇಬ್ನ್ ಮಸ್‌ಊದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಹೇಳುತ್ತಾರೆ: "ಅವರು ನನಗೆ ಈ ಎಲ್ಲಾ ಕರ್ಮಗಳನ್ನು ತಿಳಿಸಿದರು. ನಾನು ಪುನಃ ಪುನಃ "ನಂತರ ಯಾವುದು" ಎಂದು ಕೇಳುತ್ತಿದ್ದರೆ, ಅವರು ಉತ್ತರಿಸುತ್ತಲೇ ಇರುತ್ತಿದ್ದರು."

Hadeeth benefits

  1. ಅಲ್ಲಾಹನ ಪ್ರೀತಿಗೆ ಅನುಗುಣವಾಗಿ ಕರ್ಮಗಳ ಶ್ರೇಷ್ಠತೆಯಲ್ಲಿ ಏರುಪೇರು ಉಂಟಾಗುತ್ತದೆ.
  2. ಅತಿಶ್ರೇಷ್ಠ ಕರ್ಮಗಳಿಗೆ ಪ್ರಥಮ ಪ್ರಾಶಸ್ತ್ಯ ನೀಡಲು ಮುಸಲ್ಮಾನರನ್ನು ಪ್ರೋತ್ಸಾಹಿಸಲಾಗಿದೆ.
  3. ಜನರು ಶ್ರೇಷ್ಠವಾದ ಕರ್ಮದ ಬಗ್ಗೆ ಕೇಳುವಾಗ, ವ್ಯಕ್ತಿ ಮತ್ತು ಸಂದರ್ಭಕ್ಕೆ ಅನುಗುಣವಾಗಿ ಮತ್ತು ಪ್ರತಿಯೊಬ್ಬ ವ್ಯಕ್ತಿಗೆ ಯಾವುದೂ ಹೆಚ್ಚು ಪ್ರಯೋಜನಕರವಾಗಿದೆಯೆಂಬ ಆಧಾರದಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿಭಿನ್ನ ಉತ್ತರಗಳನ್ನು ನೀಡುತ್ತಿದ್ದರು.