/ ನೀವು ಆಲೋಚಿಸಿ ನೋಡಿದ್ದೀರಾ! ನಿಮ್ಮಲ್ಲೊಬ್ಬನ ಮನೆಯ ಬಾಗಿಲಿನ ಬಳಿ ಒಂದು ನದಿ ಹರಿಯುತ್ತಿದ್ದು, ಅವನು ಅದರಲ್ಲಿ ಪ್ರತಿ ದಿನ ಐದು ಬಾರಿ ಸ್ನಾನ ಮಾಡುತ್ತಿದ್ದರೆ, ಅವನಲ್ಲಿ ಏನಾದರೂ ಕೊಳೆ ಉಳಿಯಬಹುದೇ?...

ನೀವು ಆಲೋಚಿಸಿ ನೋಡಿದ್ದೀರಾ! ನಿಮ್ಮಲ್ಲೊಬ್ಬನ ಮನೆಯ ಬಾಗಿಲಿನ ಬಳಿ ಒಂದು ನದಿ ಹರಿಯುತ್ತಿದ್ದು, ಅವನು ಅದರಲ್ಲಿ ಪ್ರತಿ ದಿನ ಐದು ಬಾರಿ ಸ್ನಾನ ಮಾಡುತ್ತಿದ್ದರೆ, ಅವನಲ್ಲಿ ಏನಾದರೂ ಕೊಳೆ ಉಳಿಯಬಹುದೇ?...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಅವರು ಕೇಳಿದ್ದರು: "ನೀವು ಆಲೋಚಿಸಿ ನೋಡಿದ್ದೀರಾ! ನಿಮ್ಮಲ್ಲೊಬ್ಬನ ಮನೆಯ ಬಾಗಿಲಿನ ಬಳಿ ಒಂದು ನದಿ ಹರಿಯುತ್ತಿದ್ದು, ಅವನು ಅದರಲ್ಲಿ ಪ್ರತಿ ದಿನ ಐದು ಬಾರಿ ಸ್ನಾನ ಮಾಡುತ್ತಿದ್ದರೆ, ಅವನಲ್ಲಿ ಏನಾದರೂ ಕೊಳೆ ಉಳಿಯಬಹುದೇ?" ಅವರು ಉತ್ತರಿಸಿದರು: "ಅವನ ದೇಹದಲ್ಲಿ ಯಾವುದೇ ಕೊಳೆ ಉಳಿಯಲಾರದು." ಅವರು (ಪ್ರವಾದಿ) ಹೇಳಿದರು: "ಅದು ಐದು ವೇಳೆಯ ನಮಾಝಿನ ಉದಾಹರಣೆಯಾಗಿದೆ. ಅದರ ಮೂಲಕ ಅಲ್ಲಾಹು ಪಾಪಗಳನ್ನು ಅಳಿಸುತ್ತಾನೆ."
متفق عليه

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಪ್ರತಿ ದಿನ-ರಾತ್ರಿ ನಿರ್ವಹಿಸುವ ಐದು ವೇಳೆಯ ನಮಾಝ್‌ಗಳನ್ನು ಮತ್ತು ಅದು ಸಣ್ಣ ಪಾಪಗಳನ್ನು ಮತ್ತು ದೋಷಗಳನ್ನು ನಿವಾರಿಸುವ ಮತ್ತು ಪರಿಹರಿಸುವ ರೀತಿಯನ್ನು ಒಬ್ಬ ವ್ಯಕ್ತಿಯ ಬಾಗಿಲಿನ ಬಳಿಯಲ್ಲಿ ಹರಿಯುವ ನದಿಗೆ, ಮತ್ತು ಅವನು ಅದರಲ್ಲಿ ಪ್ರತಿ ದಿನ ಐದು ಬಾರಿ ಸ್ನಾನ ಮಾಡುವುದರಿಂದ ಅವನ ದೇಹದಲ್ಲಿ ಯಾವುದೇ ಕೊಳೆ ಉಳಿಯದಿರುವುದಕ್ಕೆ ಹೋಲಿಸಿದ್ದಾರೆ.

Hadeeth benefits

  1. ಈ ಶ್ರೇಷ್ಠತೆಯು ಕೇವಲ ಸಣ್ಣ ಪಾಪಗಳನ್ನು ಪರಿಹರಿಸುವುದಕ್ಕೆ ಸೀಮಿತವಾಗಿದೆ. ಮಹಾಪಾಪಗಳು ಪರಿಹಾರವಾಗಲು ಪಶ್ಚಾತ್ತಾಪ ಪಡುವುದು ಕಡ್ಡಾಯವಾಗಿದೆ.
  2. ಐದು ವೇಳೆಯ ನಮಾಝ್‌ಗಳನ್ನು ಅವುಗಳ ಷರತ್ತುಗಳು, ಸ್ತಂಭಗಳು, ಕಡ್ಡಾಯ ಕಾರ್ಯಗಳು ಮತ್ತು ಐಚ್ಛಿಕ ಕಾರ್ಯಗಳನ್ನು ಪಾಲಿಸಿಕೊಂಡು ನಿರ್ವಹಿಸುವುದರ ಮತ್ತು ಸಂರಕ್ಷಿಸುವುದರ ಶ್ರೇಷ್ಠತೆಯನ್ನು ತಿಳಿಸಲಾಗಿದೆ.