- ಸಾಮೂಹಿಕವಾಗಿ ನಮಾಝ್ ನಿರ್ವಹಿಸುವುದು ಕಡ್ಡಾಯವಾಗಿದೆ ಎಂದು ಈ ಹದೀಸ್ ತಿಳಿಸುತ್ತದೆ. ಏಕೆಂದರೆ, ಕಡ್ಡಾಯ ಮತ್ತು ಅನಿವಾರ್ಯವಾಗಿರುವ ಕಾರ್ಯಕ್ಕೆ ಮಾತ್ರ ರಿಯಾಯಿತಿ ನೀಡಲಾಗುತ್ತದೆ.
- ಅಝಾನ್ ಕೇಳುವವನು ಅದಕ್ಕೆ ಉತ್ತರ ನೀಡಬೇಕೆಂದು ಆಜ್ಞಾಪಿಸಿದ್ದು ನಮಾಝನ್ನು ಸಾಮೂಹಿಕವಾಗಿ (ಜಮಾಅತ್ ಆಗಿ) ನಿರ್ವಹಿಸುವುದು ಕಡ್ಡಾಯವೆಂದು ಸೂಚಿಸುತ್ತದೆ. ಏಕೆಂದರೆ, ಮೂಲನಿಯಮದ ಪ್ರಕಾರ ಆಜ್ಞಾಪಿಸಲಾದ ವಿಷಯಗಳೆಲ್ಲವೂ ಕಡ್ಡಾಯವಾಗಿವೆ.