/ ಮುಅಝ್ಝಿನ್ (ಅಝಾನ್ ಕರೆ ನೀಡುವವನು) ಕರೆ ನೀಡುವುದನ್ನು ಕೇಳಿದಾಗ, ಯಾರು "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಮತ್ತು ಮುಹಮ್ಮದ್ ಅವನ ದಾಸರು ಮತ್ತು ಸಂದೇಶವಾಹಕರು ಎಂದು ನಾನು ಸಾಕ್ಷ್ಯ ವಹಿಸುತ್ತೇನೆ, ಪರಿಪಾಲಕನಾಗಿ ಅಲ್ಲಾಹನಲ್ಲ...

ಮುಅಝ್ಝಿನ್ (ಅಝಾನ್ ಕರೆ ನೀಡುವವನು) ಕರೆ ನೀಡುವುದನ್ನು ಕೇಳಿದಾಗ, ಯಾರು "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಮತ್ತು ಮುಹಮ್ಮದ್ ಅವನ ದಾಸರು ಮತ್ತು ಸಂದೇಶವಾಹಕರು ಎಂದು ನಾನು ಸಾಕ್ಷ್ಯ ವಹಿಸುತ್ತೇನೆ, ಪರಿಪಾಲಕನಾಗಿ ಅಲ್ಲಾಹನಲ್ಲ...

ಸಅದ್ ಬಿನ್ ಅಬೂ ವಕ್ಕಾಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮುಅಝ್ಝಿನ್ (ಅಝಾನ್ ಕರೆ ನೀಡುವವನು) ಕರೆ ನೀಡುವುದನ್ನು ಕೇಳಿದಾಗ, ಯಾರು "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು, ಮತ್ತು ಮುಹಮ್ಮದ್ ಅವನ ದಾಸರು ಮತ್ತು ಸಂದೇಶವಾಹಕರು ಎಂದು ನಾನು ಸಾಕ್ಷ್ಯ ವಹಿಸುತ್ತೇನೆ, ಪರಿಪಾಲಕನಾಗಿ ಅಲ್ಲಾಹನಲ್ಲಿ, ಸಂದೇಶವಾಹಕರಾಗಿ ಮುಹಮ್ಮದ್‌ರಲ್ಲಿ ಮತ್ತು ಧರ್ಮವಾಗಿ ಇಸ್ಲಾಂನಲ್ಲಿ ನನಗೆ ತೃಪ್ತಿಯಿದೆ ಎಂದು ಹೇಳುತ್ತಾನೋ, ಅವನಿಗೆ ಅವನ ಪಾಪಗಳನ್ನು ಕ್ಷಮಿಸಲಾಗುತ್ತದೆ."
رواه مسلم

ವಿವರಣೆ

ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ತಿಳಿಸುವುದೇನೆಂದರೆ, ಯಾರು ಮುಅಝ್ಝಿನ್‌ನ ಕರೆ ಕೇಳುವಾಗ ಈ ರೀತಿ ಹೇಳುತ್ತಾನೋ: "ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ, ಅವನು ಏಕೈಕನು ಮತ್ತು ಸಹಭಾಗಿಗಳಿಲ್ಲದವನು ಎಂದು ನಾನು ಸಾಕ್ಷ್ಯ ವಹಿಸುತ್ತೇನೆ." ಅಂದರೆ, ಅಲ್ಲಾಹನ ಹೊರತು ಬೇರೆ ಸತ್ಯ ಆರಾಧ್ಯರಿಲ್ಲ ಮತ್ತು ಅವನ ಹೊರತಾದ ದೇವರುಗಳೆಲ್ಲವೂ ಸುಳ್ಳು ಎಂದು ನಾನು ಒಪ್ಪಿಕೊಂಡು ಅಂಗೀಕರಿಸುತ್ತೇನೆ ಮತ್ತು (ನಾಲಗೆಯ ಮೂಲಕ) ಉಚ್ಛರಿಸುತ್ತೇನೆ. "ಮುಹಮ್ಮದ್ ಅಲ್ಲಾಹನ ದಾಸರು ಮತ್ತು ಸಂದೇಶವಾಹಕರೆಂದು ನಾನು ಸಾಕ್ಷ್ಯ ವಹಿಸುತ್ತೇನೆ." ಅಂದರೆ, ಅವರು ದಾಸರಾಗಿದ್ದಾರೆ, ಅವರನ್ನು ಆರಾಧಿಸಬಾರದು ಮತ್ತು ಅವರು ಸಂದೇಶವಾಹಕರಾಗಿದ್ದಾರೆ, ಅವರನ್ನು ತಿರಸ್ಕರಿಸಬಾರದು. "ಪರಿಪಾಲಕನಾಗಿ ಅಲ್ಲಾಹನಲ್ಲಿ ನನಗೆ ತೃಪ್ತಿಯಿದೆ." ಅಂದರೆ, ಅವನ ಪ್ರಭುತ್ವದಲ್ಲಿ, ದೈವಿಕತೆಯಲ್ಲಿ ಮತ್ತು ಅವನ ಹೆಸರು ಹಾಗೂ ಗುಣಲಕ್ಷಣಗಳಲ್ಲಿ ನನಗೆ ತೃಪ್ತಿಯಿದೆ. "ಸಂದೇಶವಾಹಕರಾಗಿ ಮುಹಮ್ಮದ್‌ರಲ್ಲಿ ತೃಪ್ತಿಯಿದೆ." ಅಂದರೆ, ಅವರೊಂದಿಗೆ ಕಳುಹಿಸಲಾದ ಮತ್ತು ಅವರು ನಮಗೆ ತಲುಪಿಸಿದ ಎಲ್ಲದರಲ್ಲೂ ನನಗೆ ತೃಪ್ತಿಯಿದೆ. "ಇಸ್ಲಾಂನಲ್ಲಿ ತೃಪ್ತಿಯಿದೆ." ಅಂದರೆ, ಆಜ್ಞೆಗಳು ಮತ್ತು ನಿಷೇಧಗಳು ಸೇರಿದಂತೆ ಇಸ್ಲಾಂ ಧರ್ಮದ ಎಲ್ಲಾ ಕಾನೂನುಗಳಲ್ಲೂ ನನಗೆ ತೃಪ್ತಿಯಿದೆ. "ಧರ್ಮವಾಗಿ": ಅಂದರೆ ವಿಶ್ವಾಸವಾಗಿ ಮತ್ತು ಸಮರ್ಪಣೆಯಾಗಿ. "ಅವನಿಗೆ ಅವನ ಪಾಪಗಳನ್ನು ಕ್ಷಮಿಸಲಾಗುತ್ತದೆ." ಅಂದರೆ, ಸಣ್ಣ ಪಾಪಗಳನ್ನು.

Hadeeth benefits

  1. ಅಝಾನ್ ಕೇಳಿದಾಗಲೆಲ್ಲಾ ಈ ಪ್ರಾರ್ಥನೆಯನ್ನು ಪುನರುಚ್ಛರಿಸುವುದರಿಂದ ಪಾಪಗಳು ಪರಿಹಾರವಾಗುತ್ತವೆ.