ಮುಅಝ್ಝಿನ್ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳುವಾಗ ನಿಮ್ಮಲ್ಲೊಬ್ಬರು ಹೃದಯಾಂತರಾಳದಿಂದ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳಿದರೆ...
ಉಮರ್ ಬಿನ್ ಖತ್ತಾಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ಮುಅಝ್ಝಿನ್ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳುವಾಗ ನಿಮ್ಮಲ್ಲೊಬ್ಬರು ಹೃದಯಾಂತರಾಳದಿಂದ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳಿದರೆ, ಮುಅಝ್ಝಿನ್ 'ಅಶ್‌ಹದು ಅನ್ ಲಾಇಲಾಹ ಇಲ್ಲಲ್ಲಾಹ್' ಎಂದು ಹೇಳುವಾಗ 'ಅಶ್‌ಹದು ಅನ್ ಲಾಇಲಾಹ ಇಲ್ಲಲ್ಲಾಹ್' ಎಂದು ಹೇಳಿದರೆ, ಮುಅಝ್ಝಿನ್ 'ಅಶ್‌ಹದು ಅನ್ನ ಮುಹಮ್ಮದನ್ ರಸೂಲುಲ್ಲಾಹ್' ಎಂದು ಹೇಳುವಾಗ 'ಅಶ್‌ಹದು ಅನ್ನ ಮುಹಮ್ಮದನ್ ರಸೂಲುಲ್ಲಾಹ್' ಎಂದು ಹೇಳಿದರೆ, ಮುಅಝ್ಝಿನ್ 'ಹಯ್ಯ ಅಲಸ್ಸಲಾಹ್' ಎಂದು ಹೇಳುವಾಗ 'ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್' ಎಂದು ಹೇಳಿದರೆ, ಮುಅಝ್ಝಿನ್ 'ಹಯ್ಯ ಅಲಲ್ ಫಲಾಹ್' ಎಂದು ಹೇಳುವಾಗ 'ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್' ಎಂದು ಹೇಳಿದರೆ, ಮುಅಝ್ಝಿನ್ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳುವಾಗ 'ಅಲ್ಲಾಹು ಅಕ್ಬರ್ ಅಲ್ಲಾಹು ಅಕ್ಬರ್' ಎಂದು ಹೇಳಿದರೆ, ಮುಅಝ್ಝಿನ್ 'ಲಾಇಲಾಹ ಇಲ್ಲಲ್ಲಾಹ್' ಎಂದು ಹೇಳುವಾಗ 'ಲಾಇಲಾಹ ಇಲ್ಲಲ್ಲಾಹ್' ಎಂದು ಹೇಳಿದರೆ, ಅವರು ಸ್ವರ್ಗವನ್ನು ಪ್ರವೇಶಿಸುತ್ತಾರೆ."
رواه مسلم
ವಿವರಣೆ
ಅಝಾನ್ ಎಂದರೆ ನಮಾಝಿನ ಸಮಯವು ಪ್ರಾರಂಭವಾಗಿದೆ ಎಂದು ತಿಳಿಸುವ ಒಂದು ಘೋಷಣೆ. ಅದರ ವಾಕ್ಯಗಳು ಇಸ್ಲಾಮೀ ವಿಶ್ವಾಸವನ್ನು ಸಂಪೂರ್ಣವಾಗಿ ಒಳಗೊಳ್ಳುವ ವಾಕ್ಯಗಳಾಗಿವೆ.
ಅಝಾನ್ ಕೇಳುವಾಗ ಏನು ಮಾಡಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಈ ಹದೀಸಿನಲ್ಲಿ ವಿವರಿಸಿದ್ದಾರೆ. ಅದೇನೆಂದರೆ ಅಝಾನ್ ಕೇಳುವವರು ಮುಅಝ್ಝಿನ್ ಹೇಳಿದಂತೆಯೇ ಹೇಳಬೇಕು. ಅಂದರೆ ಮುಅಝ್ಝಿನ್ 'ಅಲ್ಲಾಹು ಅಕ್ಬರ್' ಎಂದು ಹೇಳುವಾಗ, ಅದನ್ನು ಕೇಳುವವರು 'ಅಲ್ಲಾಹು ಅಕ್ಬರ್' ಎಂದು ಹೇಳಬೇಕು... ಆದರೆ ಮುಅಝ್ಝಿನ್ "ಹಯ್ಯ ಅಲಸ್ಸಲಾಹ್" ಮತ್ತು "ಹಯ್ಯ ಅಲಲ್ ಫಲಾಹ್" ಎಂದು ಹೇಳುವಾಗ, ಕೇಳುವವರು "ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್" ಎಂದು ಹೇಳಬೇಕು.
ಯಾರು ನಿಷ್ಕಳಂಕ ಹೃದಯದಿಂದ ಮುಅಝ್ಝಿನ್ ಹೇಳಿದ್ದನ್ನು ಪುನರಾವರ್ತಿಸುತ್ತಾರೋ ಅವರು ಸ್ವರ್ಗವನ್ನು ಪ್ರವೇಶಿಸುತ್ತಾರೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸಿದ್ದಾರೆ.
ಅಝಾನ್‌ನ ವಾಕ್ಯಗಳ ಅರ್ಥ: "ಅಲ್ಲಾಹು ಅಕ್ಬರ್": ಅಲ್ಲಾಹು ಎಲ್ಲಾ ವಸ್ತುಗಳಿಗಿಂತಲೂ ಪರಮೋಚ್ಛನು ಮತ್ತು ಪರಮ ಶ್ರೇಷ್ಠನು.
"ಅಶ್‌ಹದು ಅನ್ ಲಾಇಲಾಹ ಇಲ್ಲಲ್ಲಾಹ್": ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ಆರಾಧ್ಯರಿಲ್ಲ.
"ಅಶ್‌ಹದು ಅನ್ನ ಮುಹಮ್ಮದನ್ ರಸೂಲುಲ್ಲಾಹ್": ಮುಹಮ್ಮದ್ ಅಲ್ಲಾಹನ ಸಂದೇಶವಾಹಕರಾಗಿದ್ದಾರೆ, ಅಲ್ಲಾಹು ಅವರನ್ನು ಕಳುಹಿಸಿದ್ದಾನೆ ಮತ್ತು ಅವರನ್ನು ಅನುಸರಿಸುವುದು ಕಡ್ಡಾಯವಾಗಿದೆಯೆಂದು ನಾನು ನನ್ನ ನಾಲಗೆ ಮತ್ತು ಹೃದಯದ ಮೂಲಕ ಒಪ್ಪಿಕೊಂಡು ಸಾಕ್ಷ್ಯ ವಹಿಸುತ್ತೇನೆ.
"ಹಯ್ಯ ಅಲಸ್ಸಲಾಹ್": ನಮಾಝ್ ನಿರ್ವಹಿಸಲು ಬನ್ನಿ. "ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್": ಆಜ್ಞಾಪಾಲನೆ ಮಾಡುವಾಗ ಎದುರಾಗುವ ತೊಡಕುಗಳಿಂದ ಪಾರಾಗಲು ಯಾವುದೇ ಮಾರ್ಗವಿಲ್ಲ ಮತ್ತು ಆಜ್ಞೆಯನ್ನು ಪಾಲಿಸಲು ಯಾವುದೇ ಶಕ್ತಿ-ಸಾಮರ್ಥ್ಯವಿಲ್ಲ—ಅಲ್ಲಾಹು ಅವುಗಳನ್ನು ಒದಗಿಸಿಕೊಟ್ಟರೆ ಹೊರತು.
"ಹಯ್ಯ ಅಲಲ್ ಫಲಾಹ್": ಯಶಸ್ಸಿನ ಮಾರ್ಗಕ್ಕೆ ಬನ್ನಿ. ಯಶಸ್ಸು ಎಂದರೆ ಸ್ವರ್ಗ ಪ್ರಾಪ್ತಿ ಮತ್ತು ನರಕ ಮುಕ್ತಿಯಾಗಿದೆ.
Hadeeth benefits
ಮುಅಝ್ಝಿನ್ ಹೇಳುವಂತೆಯೇ ಪುನರುಚ್ಛರಿಸುವ ಮೂಲಕ ಉತ್ತರ ನೀಡುವುದರ ಶ್ರೇಷ್ಠತೆ. ಆದರೆ 'ಹಯ್ಯ ಅಲಸ್ಸಲಾಹ್' ಮತ್ತು 'ಹಯ್ಯ ಅಲಲ್ ಫಲಾಹ್' ಎಂದು ಹೇಳುವಾಗ, 'ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್' ಎಂದು ಹೇಳಬೇಕಾಗಿದೆ.
Share
Use the QR code to easily share the message of Islam with others