- ಸತ್ಯವಿಶ್ವಾಸಕ್ಕೆ ಅನೇಕ ಹಂತಗಳಿವೆ ಮತ್ತು ಕೆಲವು ಹಂತಗಳು ಇತರವುಗಳಿಗಿಂತ ಶ್ರೇಷ್ಠವಾಗಿವೆಯೆಂದು ಈ ಹದೀಸ್ ತಿಳಿಸುತ್ತದೆ.
- ಸತ್ಯವಿಶ್ವಾಸ (ಈಮಾನ್) ಎಂದರೆ ಮಾತು, ಕ್ರಿಯೆ ಮತ್ತು ವಿಶ್ವಾಸವಾಗಿದೆ.
- ಅಲ್ಲಾಹನ ಬಗ್ಗೆ ಸಂಕೋಚ ಪಡುವುದು ಎಂದರೆ, ಅಲ್ಲಾಹು ವಿರೋಧಿಸಿದ ಕಾರ್ಯಗಳಲ್ಲಿ ನೀವು ಇರುವುದನ್ನು ಮತ್ತು ಅವನು ಆದೇಶಿಸಿದ ಕಾರ್ಯಗಳಲ್ಲಿ ನೀವು ಇಲ್ಲದಿರುವುದನ್ನು ಅವನು ನೋಡಬಾರದು ಎಂಬುದಾಗಿದೆ.
- ಇಲ್ಲಿ ಸಂಖ್ಯೆಯನ್ನು ಉಲ್ಲೇಖಿಸಿರುವುದು ಸತ್ಯವಿಶ್ವಾಸದ ಕರ್ಮಗಳನ್ನು ಆ ಸಂಖ್ಯೆಗೆ ಸೀಮಿತಗೊಳಿಸುವುದಕ್ಕಲ್ಲ. ಬದಲಾಗಿ, ಸತ್ಯವಿಶ್ವಾಸದಲ್ಲಿ ನೂರಾರು ಕರ್ಮಗಳು ಒಳಗೊಳ್ಳುತ್ತವೆ ಎಂದು ಸೂಚಿಸುವುದಕ್ಕಾಗಿದೆ. ಅರಬ್ಬರು ಕೆಲವೊಮ್ಮೆ ವಿಷಯಗಳನ್ನು ಎಣಿಸಲು ಸಂಖ್ಯೆಯನ್ನು ಬಳಸುತ್ತಾರಾದರೂ ಅವರ ಉದ್ದೇಶವು ಆ ವಿಷಯವನ್ನು ಸಂಖ್ಯೆಗೆ ಸೀಮಿತಗೊಳಿಸುವುದಲ್ಲ.