- ನಾಯಿಯ ಜೊಲ್ಲು ತೀವ್ರಸ್ವರೂಪದ ಅಶುದ್ಧಿಯಾಗಿದೆ.
- ನಾಯಿ ಪಾತ್ರೆಯನ್ನು ನೆಕ್ಕಿದರೆ, ಆ ಪಾತ್ರೆ ಮತ್ತು ಅದರಲ್ಲಿರುವ ನೀರು ಅಶುದ್ಧವಾಗುತ್ತದೆ.
- ಮಣ್ಣಿನ ಮೂಲಕ ಮತ್ತು ಏಳು ಬಾರಿ ಪುನರಾವರ್ತಿಸಿ ತೊಳೆಯುವ ಮೂಲಕ ಶುದ್ಧೀಕರಿಸಬೇಕೆಂದು ಹೇಳಿರುವುದು ಕೇವಲ ನಾಯಿ ನೆಕ್ಕಿರುವುದನ್ನು ಶುದ್ಧೀಕರಿಸಲು ಮಾತ್ರ. ಅದರ ಮಲ-ಮೂತ್ರ ತಾಗಿದರೆ, ಅಥವಾ ನಾಯಿ ಅಶುದ್ಧಗೊಳಿಸಿರುವುದನ್ನು ಶುದ್ಧೀಕರಿಸಲು ಹೀಗೆ ಮಾಡಬೇಕಾಗಿಲ್ಲ.
- ಮಣ್ಣು ಬಳಸಿ ಪಾತ್ರೆಯನ್ನು ತೊಳೆಯುವ ವಿಧಾನ: ಪಾತ್ರೆಗೆ ನೀರು ಸುರಿದು ಅದಕ್ಕೆ ಮಣ್ಣು ಬೆರೆಸಬೇಕು, ನಂತರ ಆ ಮಿಶ್ರಣದಿಂದ ಪಾತ್ರೆಯನ್ನು ಚೆನ್ನಾಗಿ ತೊಳೆಯಬೇಕು.
- ಹದೀಸಿನ ಬಾಹ್ಯಾರ್ಥ ಪ್ರಕಾರ ಈ ನಿಯಮವು ಎಲ್ಲಾ ನಾಯಿಗಳಿಗೂ ಅನ್ವಯವಾಗುತ್ತದೆ. ಬೇಟೆ ನಾಯಿ, ಕಾವಲು ನಾಯಿ ಮತ್ತು ಜಾನುವಾರುಗಳನ್ನು ಕಾಯುವ ನಾಯಿ ಮುಂತಾದ ಶಾಸನಕರ್ತನು (ಅಲ್ಲಾಹು) ಇಟ್ಟುಕೊಳ್ಳಬಹುದೆಂದು ಅನುಮತಿ ನೀಡಿದ ನಾಯಿಗಳಿಗೂ ಈ ನಿಯಮ ಅನ್ವಯವಾಗುತ್ತದೆ.
- ಸಾಬೂನು ಮತ್ತು ಪೊಟಾಸಿಯಂ ಮಣ್ಣಿಗೆ ಬದಲಿಯಾಗುವುದಿಲ್ಲ. ಏಕೆಂದರೆ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಣ್ಣು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.