/ ನಿಮ್ಮಲ್ಲೊಬ್ಬನಿಗೆ ತನ್ನ ಹೊಟ್ಟೆಯೊಳಗೆ ಏನೋ ಅನುಭವವಾಗಿ, ಅದರಿಂದ ಏನಾದರೂ ಹೊರ ಬಂದಿದೆಯೋ ಇಲ್ಲವೋ ಎಂದು ಸಂಶಯವಾದರೆ, ಸದ್ದು ಕೇಳುವ ತನಕ ಅಥವಾ ವಾಸನೆ ಅನುಭವವಾಗುವ ತನಕ ಅವನು ಮಸೀದಿಯಿಂದ ಹೊರಹೋಗಬಾರದು...

ನಿಮ್ಮಲ್ಲೊಬ್ಬನಿಗೆ ತನ್ನ ಹೊಟ್ಟೆಯೊಳಗೆ ಏನೋ ಅನುಭವವಾಗಿ, ಅದರಿಂದ ಏನಾದರೂ ಹೊರ ಬಂದಿದೆಯೋ ಇಲ್ಲವೋ ಎಂದು ಸಂಶಯವಾದರೆ, ಸದ್ದು ಕೇಳುವ ತನಕ ಅಥವಾ ವಾಸನೆ ಅನುಭವವಾಗುವ ತನಕ ಅವನು ಮಸೀದಿಯಿಂದ ಹೊರಹೋಗಬಾರದು...

ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲೊಬ್ಬನಿಗೆ ತನ್ನ ಹೊಟ್ಟೆಯೊಳಗೆ ಏನೋ ಅನುಭವವಾಗಿ, ಅದರಿಂದ ಏನಾದರೂ ಹೊರ ಬಂದಿದೆಯೋ ಇಲ್ಲವೋ ಎಂದು ಸಂಶಯವಾದರೆ, ಸದ್ದು ಕೇಳುವ ತನಕ ಅಥವಾ ವಾಸನೆ ಅನುಭವವಾಗುವ ತನಕ ಅವನು ಮಸೀದಿಯಿಂದ ಹೊರಹೋಗಬಾರದು."
رواه مسلم

ವಿವರಣೆ

ಇಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ನಮಾಝ್ ಮಾಡುವವನಿಗೆ ಹೊಟ್ಟೆಯಲ್ಲಿ ಏನಾದರೂ ಅನುಭವವಾಗಿ, ಏನಾದರೂ ಹೊರ ಹೋಗಿದೆಯೋ ಇಲ್ಲವೋ ಎಂದು ಸಂಶಯವಾದರೆ, ಅವನು ನಮಾಝನ್ನು ಅರ್ಧದಲ್ಲಿ ಬಿಟ್ಟು ವುದೂ ನಿರ್ವಹಿಸುವುದಕ್ಕಾಗಿ ಹೊರಹೋಗಬಾರದು. ಎಲ್ಲಿಯವರೆಗೆಂದರೆ ಅದರ ಸದ್ದು ಕೇಳಿ, ಅಥವಾ ಅದರ ವಾಸನೆ ಅನುಭವವಾಗಿ, ವುದೂ ಅಸಿಂಧುವಾಗಿದೆಯೆಂದು ಅವನಿಗೆ ಖಾತ್ರಿಯಾಗುವ ತನಕ. ಏಕೆಂದರೆ, ಸಂಶಯವು ಖಾತ್ರಿಯನ್ನು ಮುರಿಯುವುದಿಲ್ಲ. ವುದೂ ನಿರ್ವಹಿಸಿದ್ದೇನೆಂದು ಖಾತ್ರಿಯಿದ್ದರೆ, ವುದೂ ಮುರಿದಿದೆಯೋ ಇಲ್ಲವೋ ಎಂಬ ಸಂಶಯವು ಅದನ್ನು ಅಸಿಂಧುಗೊಳಿಸುವುದಿಲ್ಲ.

Hadeeth benefits

  1. ಈ ಹದೀಸ್ ಇಸ್ಲಾಂ ಧರ್ಮದ ಮೂಲಸಿದ್ಧಾಂತಗಳಲ್ಲಿ ಒಂದಾಗಿದೆ ಮತ್ತು ಕರ್ಮಶಾಸ್ತ್ರದ ಮೂಲನಿಯಮಗಳಲ್ಲಿ ಒಂದಾಗಿದೆ. ಸಂಶಯದಿಂದ ಖಾತ್ರಿಯು ನಿವಾರಣೆಯಾಗುವುದಿಲ್ಲ ಎಂಬುದೇ ಆ ಸಿದ್ಧಾಂತ ಮತ್ತು ನಿಯಮ. ಮೂಲಸ್ಥಿತಿಯು, ಅದಕ್ಕೆ ವಿರುದ್ಧವಾದುದು ಖಾತ್ರಿಯಾಗುವ ತನಕ ಹಾಗೆಯೇ ಉಳಿಯುತ್ತದೆ.
  2. ಸಂಶಯವು ಶುದ್ಧಿಯ ಮೇಲೆ ಪರಿಣಾಮ ಬೀರುವುದಿಲ್ಲ. ಅಶುದ್ಧಿ ಉಂಟಾಗಿದೆಯೆಂದು ಖಾತ್ರಿಯಾಗುವ ತನಕ ನಮಾಝ್ ಮಾಡುವವನು ಶುದ್ಧಿಯಲ್ಲೇ ಇರುತ್ತಾನೆ.