- ಸ್ನಾನದಲ್ಲಿ ಎರಡು ವಿಧಗಳಿವೆ: ಪರ್ಯಾಪ್ತ ಮತ್ತು ಸಂಪೂರ್ಣ. ಪರ್ಯಾಪ್ತ ಸ್ನಾನ ಎಂದರೆ ದೇಹವನ್ನು ಶುಚೀಕರಿಸುತ್ತೇನೆಂದು ನಿಯ್ಯತ್ (ಸಂಕಲ್ಪ) ಮಾಡಿ, ಬಾಯಿ ಮುಕ್ಕಳಿಸುವುದು ಮತ್ತು ಮೂಗಿಗೆ ನೀರೆಳೆದು ಹೊರಬಿಡುವುದು ಸೇರಿದಂತೆ ಸಂಪೂರ್ಣ ದೇಹವನ್ನು ತೊಳೆಯುವುದು. ಸಂಪೂರ್ಣ ಸ್ನಾನ ಎಂದರೆ ಈ ಹದೀಸಿನಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸ್ನಾನ ಮಾಡಿದಂತೆ ಸ್ನಾನ ಮಾಡುವುದು.
- ದೊಡ್ಡ ಅಶುದ್ಧಿ (ಜನಾಬತ್) ಯಲ್ಲಿರುವವರು ಎಂದರೆ, ವೀರ್ಯ ಸ್ಖಲನವಾದವರು ಅಥವಾ ಸಂಭೋಗ ಮಾಡಿದವರು. ಅವರಿಗೆ ಸ್ಖಲನವಾಗದಿದ್ದರೂ ಸಹ.
- ದಂಪತಿಗಳು ಒಬ್ಬರು ಇನ್ನೊಬ್ಬರ ಖಾಸಗಿ ಭಾಗವನ್ನು ನೋಡಲು ಮತ್ತು ಒಂದೇ ಪಾತ್ರೆಯಿಂದ ಸ್ನಾನ ಮಾಡಲು ಅನುಮತಿಯಿದೆ.