- ಅಲ್ಲಾಹು ಪ್ರೀತಿಸುವ, ಸಂಪ್ರೀತನಾಗುವ ಮತ್ತು ಆದೇಶಿಸುವ ಈ ಪ್ರವಾದಿಗಳ ಚರ್ಯೆಗಳು ಸಂಪೂರ್ಣತೆ, ಪರಿಶುದ್ಧತೆ, ಮತ್ತು ಸೌಂದರ್ಯವನ್ನು ಉತ್ತೇಜಿಸುತ್ತವೆ.
- ಈ ಕಾರ್ಯಗಳನ್ನು ನಿಯಮಿತವಾಗಿ ನಿರ್ವಹಿಸಬೇಕು ಮತ್ತು ಅವುಗಳನ್ನು ನಿರ್ಲಕ್ಷಿಸಬಾರದು.
- ಈ ಕಾರ್ಯಗಳಿಗೆ ಧಾರ್ಮಿಕ ಮತ್ತು ಭೌತಿಕ ಪ್ರಯೋಜನಗಳಿವೆ. ಅವುಗಳಲ್ಲಿ ಕೆಲವು ಹೀಗಿವೆ: ರೂಪವನ್ನು ಉತ್ತಮಗೊಳಿಸುವುದು, ದೇಹವನ್ನು ಶುಚಿಯಾಗಿಡುವುದು, ಶುದ್ಧೀಕರಣದ ಬಗ್ಗೆ ಸೂಕ್ಷ್ಮತೆ ಪಾಲಿಸುವುದು, ಸತ್ಯನಿಷೇಧಿಗಳಿಗೆ ವಿರುದ್ಧವಾಗುವುದು ಮತ್ತು ಅಲ್ಲಾಹನ ಆಜ್ಞೆಗಳಿಗೆ ವಿಧೇಯತೆ ತೋರುವುದು.
- ಇತರ ಹದೀಸ್‌ಗಳಲ್ಲಿ ಈ ಐದು ಕಾರ್ಯಗಳಿಗೆ ಹೊರತಾಗಿ ಇನ್ನೂ ಅನೇಕ ಕಾರ್ಯಗಳನ್ನು ಫಿತ್ರ (ಸಹಜ ಮನೋಧರ್ಮ) ದಲ್ಲಿ ಸೇರಿಸಲಾಗಿದೆ. ಉದಾಹರಣೆಗೆ, ದಾಡಿ ಬೆಳೆಸುವುದು, ಮಿಸ್ವಾಕ್ ಮಾಡುವುದು ಇತ್ಯಾದಿ.