- ಪರಲೋಕದಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶಿಫಾರಸ್ಸು ಮಾಡುತ್ತಾರೆಂದು ಈ ಹದೀಸ್ ತಿಳಿಸುತ್ತದೆ. ಆದರೆ, ಆ ಶಿಫಾರಸ್ಸು ಏಕದೇವ ವಿಶ್ವಾಸಿಗಳಿಗೆ ಮಾತ್ರ ಸೀಮಿತವಾಗಿದೆ.
- ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಶಿಫಾರಸ್ಸು ಎಂದರೆ ನರಕಕ್ಕೆ ಅರ್ಹರಾದ ಏಕದೇವವಿಶ್ವಾಸಿಗಳನ್ನು ನರಕಕ್ಕೆ ಸೇರಿಸದಿರಲು ಮತ್ತು ಈಗಾಗಲೇ ನರಕದಲ್ಲಿರುವ ಏಕದೇವವಿಶ್ವಾಸಿಗಳನ್ನು ಅದರಿಂದ ಹೊರತರಲು ಅಲ್ಲಾಹನಲ್ಲಿ ಮಾಡುವ ಪ್ರಾರ್ಥನೆ.
- ಅಲ್ಲಾಹನಿಗಾಗಿ ನಿಷ್ಕಳಂಕವಾಗಿ ಉಚ್ಛರಿಸಲಾದ ಏಕದೇವತ್ವದ ವಚನದ ಶ್ರೇಷ್ಠತೆ ಮತ್ತು ಅದರ ಅಮೋಘ ಪರಿಣಾಮವನ್ನು ಈ ಹದೀಸ್ ವಿವರಿಸುತ್ತದೆ.
- ಏಕದೇವತ್ವದ ವಚನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಎಂದರೆ ಅದರ ಅರ್ಥವನ್ನು ಕಲಿತು, ಅದರ ಬೇಡಿಕೆಗಳ ಪ್ರಕಾರ ಕರ್ಮವೆಸಗುವುದು.
- ಅಬೂ ಹುರೈರ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಶ್ರೇಷ್ಠತೆಯನ್ನು ಮತ್ತು ಜ್ಞಾನದ ಬಗ್ಗೆ ಅವರಿಗಿದ್ದ ಆಸಕ್ತಿಯನ್ನು ಈ ಹದೀಸ್ ತಿಳಿಸುತ್ತದೆ.