- ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯರಿಲ್ಲ ಎಂದು ಸಾಕ್ಷಿ ವಹಿಸಬೇಕು ಎಂದರೆ ಆರಾಧನೆಗಳನ್ನು ಅಲ್ಲಾಹನಿಗೆ ಮಾತ್ರ ಅರ್ಪಿಸಬೇಕು ಮತ್ತು ಅಲ್ಲಾಹು ಅಲ್ಲದವರನ್ನು ಆರಾಧಿಸಬಾರದು ಎಂದರ್ಥ.
- ಮುಹಮ್ಮದ್ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷಿ ವಹಿಸಬೇಕು ಎಂದರೆ ಅವರಲ್ಲಿ ಮತ್ತು ಅವರು ತಂದ ಸಂದೇಶದಲ್ಲಿ ವಿಶ್ವಾಸವಿಡಬೇಕು, ಅವರ ಮಾತುಗಳನ್ನು ಸತ್ಯವೆಂದು ನಂಬಬೇಕು ಮತ್ತು ಅವರು ಮನುಕುಲಕ್ಕೆ ಕಳುಹಿಸಲಾದ ಅಂತಿಮ ಪ್ರವಾದಿಯೆಂದು ವಿಶ್ವಾಸವಿಡಬೇಕು ಎಂದರ್ಥ.
- ಜ್ಞಾನವಿರುವವರೊಡನೆ ಮತ್ತು ಸಂಶಯವಿರುವವರೊಡನೆ ಮಾತನಾಡುವುದು ಅವಿವೇಕಿಗಳೊಡನೆ ಮಾತನಾಡಿದಂತಲ್ಲ ಎಂದು ಈ ಹದೀಸ್ ತಿಳಿಸುತ್ತದೆ. ಆದ್ದರಿಂದಲೇ, ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮುಆದ್‌ರನ್ನು ಎಚ್ಚರಿಸುತ್ತಾ ಹೇಳಿದರು: “ನಿಶ್ಚಯವಾಗಿಯೂ ನೀವು ಗ್ರಂಥದವರ ಬಳಿಗೆ ಹೋಗುತ್ತಿದ್ದೀರಿ.”
- ಸಂಶಯ ಮೂಡಿಸುವವರ ಸಂಶಯಗಳಿಂದ ಪಾರಾಗಲು ಮುಸಲ್ಮಾನನು ಯಾವಾಗಲೂ ತನ್ನ ಧರ್ಮದ ಬಗ್ಗೆ ಒಳನೋಟವನ್ನು ಹೊಂದಿರಬೇಕಾದ ಪ್ರಾಮುಖ್ಯತೆಯನ್ನು ಈ ಹದೀಸ್ ತಿಳಿಸುತ್ತದೆ. ಇದು ಧರ್ಮದ ಬಗ್ಗೆ ಕಲಿಯುವುದರಿಂದ ಸಾಧಿಸಬಹುದು.
- ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪ್ರವಾದಿಯಾಗಿ ಕಳುಹಿಸಿದ ನಂತರ ಯಹೂದಿಗಳ ಮತ್ತು ಕ್ರಿಶ್ಚಿಯನ್ನರ ಧರ್ಮಗಳು ಅಸಿಂಧುವಾಗಿವೆ; ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಪ್ರವಾದಿಯವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿಶ್ವಾಸವಿಡದಿದ್ದರೆ, ಅವರಿಗೆ ಪುನರುತ್ಥಾನ ದಿನ ಮೋಕ್ಷ ಸಿಗುವುದಿಲ್ಲ ಎಂದು ಈ ಹದೀಸ್ ತಿಳಿಸುತ್ತದೆ.