- ಈ ಹದೀಸ್ ಏಕದೇವ ವಿಶ್ವಾಸದ ಶ್ರೇಷ್ಠತೆಯನ್ನು, ಅಂದರೆ ಒಬ್ಬ ವ್ಯಕ್ತಿ ಅಲ್ಲಾಹನೊಡನೆ ಯಾವುದೇ ಸಹಭಾಗಿತ್ವ (ಶಿರ್ಕ್) ಮಾಡದೆ ಸತ್ಯವಿಶ್ವಾಸಿಯಾಗಿ ಮರಣ ಹೊಂದಿದರೆ ಅವನು ಸ್ವರ್ಗವಾಸಿಯಾಗುತ್ತಾನೆಂದು ವಿವರಿಸುತ್ತದೆ.
- ಈ ಹದೀಸ್ ಸಹಭಾಗಿತ್ವದ (ಶಿರ್ಕ್) ಅಪಾಯವನ್ನು, ಅಂದರೆ ಒಬ್ಬ ವ್ಯಕ್ತಿ ಅಲ್ಲಾಹನೊಡನೆ ಸಹಭಾಗಿತ್ವ (ಶಿರ್ಕ್) ಮಾಡಿ ಮರಣ ಹೊಂದಿದರೆ ಅವನು ನರಕವಾಸಿಯಾಗುತ್ತಾನೆಂದು ತಿಳಿಸುತ್ತದೆ.
- ಏಕದೇವ ವಿಶ್ವಾಸಿಗಳ ಪೈಕಿ ಪಾಪವೆಸಗಿದವರ ವಿಧಿಯು ಅಲ್ಲಾಹನ ಇಚ್ಚೆಗೆ ಒಳಪಟ್ಟಿದೆ. ಅವನು ಅವರನ್ನು ಶಿಕ್ಷಿಸಬಹುದು ಅಥವಾ ಅವರನ್ನು ಕ್ಷಮಿಸಬಹುದು. ಶಿಕ್ಷೆಗೆ ಒಳಗಾದವರು ಶಿಕ್ಷೆಯ ನಂತರ ಸ್ವರ್ಗಕ್ಕೆ ಹೋಗುತ್ತಾರೆ.