- ಈ ಹದೀಸ್ ನಿಷ್ಕಳಂಕತೆಯನ್ನು ಪ್ರೋತ್ಸಾಹಿಸುತ್ತದೆ. ಏಕೆಂದರೆ ಅಲ್ಲಾಹು ಅವನ ಸಂಪ್ರೀತಿಗಾಗಿ ಮಾಡಿದ ಕರ್ಮದ ಹೊರತು ಇತರ ಯಾವುದೇ ಕರ್ಮವನ್ನು ಸ್ವೀಕರಿಸುವುದಿಲ್ಲ.
- ಅಲ್ಲಾಹನ ಸಾಮೀಪ್ಯ ಪಡೆಯುವುದಕ್ಕಾಗಿ ಮಾಡಲಾಗುವ ಕರ್ಮಗಳನ್ನು (ಸತ್ಕರ್ಮಗಳನ್ನು) ಅಲ್ಲಾಹನ ಸಾಮೀಪ್ಯವನ್ನು ಉದ್ದೇಶಿಸದೆ ಕೇವಲ ರೂಢಿಯಾಗಿ (ಯಾಂತ್ರಿಕವಾಗಿ) ನಿರ್ವಹಿಸಿದರೆ, ಆ ಕರ್ಮಗಳು ಪ್ರತಿಫಲಾರ್ಹವಾಗುವುದಿಲ್ಲ.