- "ಲಾ ಇಲಾಹ ಇಲ್ಲಲ್ಲಾಹ್" ಉಚ್ಛರಿಸುವುದು ಮತ್ತು ಅಲ್ಲಾಹನ ಹೊರತಾಗಿ ಆರಾಧಿಸಲಾಗುವ ಎಲ್ಲವನ್ನೂ ನಿಷೇಧಿಸುವುದು ಇಸ್ಲಾಂ ಧರ್ಮವನ್ನು ಸ್ವೀಕರಿಸುವುದಕ್ಕಿರುವ ಷರತ್ತುಗಳಾಗಿವೆ.
- "ಲಾ ಇಲಾಹ ಇಲ್ಲಲ್ಲಾಹ್" ಎಂದರೆ ಅಲ್ಲಾಹನ ಹೊರತಾಗಿ ಆರಾಧಿಸಲಾಗುವ ವಿಗ್ರಹಗಳು, ಸಮಾಧಿಗಳು ಮುಂತಾದ ಎಲ್ಲವನ್ನೂ ನಿಷೇಧಿಸಿ ಏಕೈಕನಾದ ಅಲ್ಲಾಹನನ್ನು ಮಾತ್ರ ಆರಾಧಿಸುವುದು.
- ಒಬ್ಬ ವ್ಯಕ್ತಿ ಏಕದೇವ ವಿಶ್ವಾಸವನ್ನು ಸ್ವೀಕರಿಸಿ ಬಹಿರಂಗವಾಗಿ ಇಸ್ಲಾಂ ಧರ್ಮದ ಕಾನೂನುಗಳನ್ನು ಪಾಲಿಸಿದರೆ, ಅವನು ಅದಕ್ಕೆ ವಿರುದ್ಧವಾದುದನ್ನು ಮಾಡಿದ್ದಾನೆಂದು ಸಾಬೀತಾಗುವ ತನಕ ಅವನ ಪ್ರಾಣಕ್ಕೆ ಕುತ್ತು ಮಾಡಬಾರದೆಂದು ಈ ಹದೀಸ್ ತಿಳಿಸುತ್ತದೆ.
- ಮುಸಲ್ಮಾನನ ಆಸ್ತಿ, ಪ್ರಾಣ ಮತ್ತು ಮಾನವು ಪವಿತ್ರವಾಗಿದ್ದು ಕಾನೂನಿಗೆ ಅನುಗುಣವಾಗಿಯೇ ಹೊರತು ಅವುಗಳಿಗೆ ಚ್ಯುತಿ ಮಾಡಬಾರದೆಂದು ಈ ಹದೀಸ್ ತಿಳಿಸುತ್ತದೆ.
- ಇಹಲೋಕದಲ್ಲಿ ವ್ಯಕ್ತಿಯ ಬಾಹ್ಯ ವರ್ತನೆಯನ್ನು ನೋಡಿ ತೀರ್ಪು ನೀಡಲಾಗುತ್ತದೆ. ಆದರೆ ಪರಲೋಕದಲ್ಲಿ ಅವನ ಆಂತರಂಗದ ಸಂಕಲ್ಪ ಮತ್ತು ಉದ್ದೇಶವನ್ನು ನೋಡಿ ತೀರ್ಪು ನೀಡಲಾಗುತ್ತದೆ.