/ ಓ ಜನರೇ! ಧರ್ಮದಲ್ಲಿ ಮಿತಿಮೀರುವುದರ ಬಗ್ಗೆ ಹುಷಾರಾಗಿರಿ! ಏಕೆಂದರೆ ನಿಮಗಿಂತ ಮೊದಲಿನವರನ್ನು ನಾಶ ಮಾಡಿದ್ದು ಧರ್ಮದಲ್ಲಿರುವ ಅತಿರೇಕವಾಗಿದೆ...

ಓ ಜನರೇ! ಧರ್ಮದಲ್ಲಿ ಮಿತಿಮೀರುವುದರ ಬಗ್ಗೆ ಹುಷಾರಾಗಿರಿ! ಏಕೆಂದರೆ ನಿಮಗಿಂತ ಮೊದಲಿನವರನ್ನು ನಾಶ ಮಾಡಿದ್ದು ಧರ್ಮದಲ್ಲಿರುವ ಅತಿರೇಕವಾಗಿದೆ...

ಇಬ್ನ್ ಅಬ್ಬಾಸ್ (ಅಲ್ಲಾಹು ಅವರಿಬ್ಬರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಅವರು ಹೇಳಿದರು: "ಅಕಬದಂದು (ದುಲ್-ಹಿಜ್ಜ ಹತ್ತನೇ ದಿನ) ಬೆಳಿಗ್ಗೆ ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಒಂಟೆಯ ಮೇಲಿದ್ದುಕೊಂಡೇ ಹೇಳಿದರು: "ನನಗೆ ಕೆಲವು ಸಣ್ಣ ಕಲ್ಲುಗಳನ್ನು ಹೆಕ್ಕಿಕೊಡಿ." ನಾನು ಅವರಿಗೆ ಕೆಲವು ಸಣ್ಣ ಕಲ್ಲುಗಳನ್ನು ಹೆಕ್ಕಿದೆ. ಅವು ಸಣ್ಣ ಗಾತ್ರದ ಕಲ್ಲುಗಳಾಗಿದ್ದವು. ಅವರು ಅದನ್ನು ಅಂಗೈಯಲ್ಲಿ ಅಲುಗಾಡಿಸುತ್ತಾ ಹೇಳಿದರು: "ಇದರಂತಿರುವುದನ್ನು ಎಸೆಯಿರಿ." ನಂತರ ಹೇಳಿದರು: "ಓ ಜನರೇ! ಧರ್ಮದಲ್ಲಿ ಮಿತಿಮೀರುವುದರ ಬಗ್ಗೆ ಹುಷಾರಾಗಿರಿ! ಏಕೆಂದರೆ ನಿಮಗಿಂತ ಮೊದಲಿನವರನ್ನು ನಾಶ ಮಾಡಿದ್ದು ಧರ್ಮದಲ್ಲಿರುವ ಅತಿರೇಕವಾಗಿದೆ."
رواه ابن ماجه والنسائي وأحمد

ವಿವರಣೆ

ಇಬ್ನ್ ಅಬ್ಬಾಸ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಇಲ್ಲಿ ತಿಳಿಸುವುದೇನೆಂದರೆ, ಅವರು ವಿದಾಯದ ಹಜ್ಜ್‌ನ ಸಂದರ್ಭದಲ್ಲಿ ಬಲಿ ದಿನದಂದು ಜಮ್ರತುಲ್ ಅಕಬಕ್ಕೆ ಕಲ್ಲು ಎಸೆಯುವ ಸ್ಥಳದಲ್ಲಿ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಜೊತೆಗಿದ್ದರು. ಆಗ ಜಮ್ರಗಳಿಗೆ ಎಸೆಯಲು ಸಣ್ಣ ಕಲ್ಲುಗಳನ್ನು ಹೆಕ್ಕಿ ಕೊಡುವಂತೆ ಅವರು ಆದೇಶಿಸಿದರು. ಆಗ ಅವರು ಕಡಲೆಯ ಅಥವಾ ಹಝೆಲ್ ಬೀಜದ ಗಾತ್ರದಲ್ಲಿರುವ ಏಳು ಸಣ್ಣ ಕಲ್ಲುಗಳನ್ನು ಹೆಕ್ಕಿ ಕೊಟ್ಟರು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅದನ್ನು ಕೈಯಲ್ಲಿಟ್ಟು ಅಲುಗಾಡಿಸಿದರು ಮತ್ತು ಹೇಳಿದರು: ಇದರ ಗಾತ್ರದಲ್ಲಿರುವುದನ್ನು ಎಸೆಯಿರಿ. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಧಾರ್ಮಿಕ ವಿಷಯಗಳಲ್ಲಿ ಹದ್ದು ಮೀರುವುದು, ಕಠೋರತನ ತೋರಿಸುವುದು ಮತ್ತು ಮಿತಿಮೀರುವುದರ ಬಗ್ಗೆ ಎಚ್ಚರಿಸಿದರು. ಏಕೆಂದರೆ, ಹದ್ದು ಮೀರಿದ್ದು, ಅತಿರೇಕವೆಸಗಿದ್ದು ಮತ್ತು ಧರ್ಮದಲ್ಲಿ ಕಠೋರತನ ತೋರಿಸಿದ್ದೇ ಪೂರ್ವ ಸಮುದಾಯಗಳನ್ನು ನಾಶ ಮಾಡಿದೆ.

Hadeeth benefits

  1. ಧರ್ಮದಲ್ಲಿ ಮಿತಿಮೀರುವುದನ್ನು ನಿಷೇಧಿಸಲಾಗಿದೆ, ಅದರ ಕೆಟ್ಟ ಫಲಿತಾಂಶದ ಬಗ್ಗೆ ವಿವರಿಸಲಾಗಿದೆ ಮತ್ತು ಅದು ನಾಶಕ್ಕೆ ಹೇತುವೆಂದು ತಿಳಿಸಲಾಗಿದೆ.
  2. ಪೂರ್ವ ಸಮುದಾಯಗಳಿಗೆ ಸಂಭವಿಸಿದ ತಪ್ಪುಗಳಿಂದ ದೂರವಿರುವುದಕ್ಕಾಗಿ ಅವರಿಂದ ಪಾಠ ಕಲಿಯಬೇಕೆಂದು ತಿಳಿಸಲಾಗಿದೆ.
  3. ಸುನ್ನತ್ತನ್ನು ಅನುಸರಿಸಲು ಪ್ರೋತ್ಸಾಹಿಸಲಾಗಿದೆ.