- ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಂದೇಶವು ಸಂಪೂರ್ಣ ಜಗತ್ತಿಗೆ ಸಾರ್ವತ್ರಿಕವಾಗಿದೆ. ಅವರನ್ನು ಅನುಸರಿಸುವುದು ಕಡ್ಡಾಯವಾಗಿದೆ. ಅವರ ಧರ್ಮಶಾಸ್ತ್ರದ ಮೂಲಕ ಇತರ ಎಲ್ಲಾ ಧರ್ಮಶಾಸ್ತ್ರಗಳನ್ನು ಅಸಿಂಧುಗೊಳಿಸಲಾಗಿದೆ.
- ಯಾರು ಪ್ರವಾದಿಯವರಲ್ಲಿ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿಶ್ವಾಸವಿಡುವುದಿಲ್ಲವೋ ಅವರಿಗೆ ಆ ವಿಶ್ವಾಸವು ಪ್ರಯೋಜನಪಡುವುದಿಲ್ಲ. ಅವರು ಇತರೆಲ್ಲಾ ಪ್ರವಾದಿಗಳಲ್ಲಿ ವಿಶ್ವಾಸವಿಡುತ್ತೇವೆಂದು ವಾದಿಸಿದರೂ ಸಹ.
- ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಗ್ಗೆ ಕೇಳದ ಮತ್ತು ಇಸ್ಲಾಮಿನ ಸಂದೇಶವು ತಲುಪದ ಜನರು ತಪ್ಪಿತಸ್ಥರಾಗುವುದಿಲ್ಲ. ಪರಲೋಕದಲ್ಲಿ ಅವರ ವಿಷಯವನ್ನು ಅಲ್ಲಾಹನ ಇಚ್ಛೆಗೆ ಬಿಟ್ಟುಬಿಡಲಾಗುತ್ತದೆ.
- ಸಾವಿಗೆ ಕೆಲವೇ ಕ್ಷಣಗಳ ಮೊದಲು ಇಸ್ಲಾಂ ಸ್ವೀಕರಿಸಿದರೂ ಅದರಿಂದ ಪ್ರಯೋಜನವಾಗುತ್ತದೆ. ಅದು ತೀವ್ರ ಅನಾರೋಗ್ಯದ ಸ್ಥಿತಿಯಲ್ಲಾದರೂ ಸಹ. ಆದರೆ ಆತ್ಮವು ಗಂಟಲಿಗೆ ತಲುಪಿದರೆ ಪ್ರಯೋಜನವಾಗುವುದಿಲ್ಲ.
- ಯಹೂದಿಗಳು ಮತ್ತು ಕ್ರೈಸ್ತರು ಸೇರಿದಂತೆ ಸತ್ಯನಿಷೇಧಿಗಳ ಧರ್ಮವನ್ನು ಸರಿಯೆಂದು ಹೇಳುವುದು ಸತ್ಯನಿಷೇಧವಾಗಿದೆ.
- ಇಲ್ಲಿ ಯಹೂದಿಗಳ ಮತ್ತು ಕ್ರೈಸ್ತರ ಹೆಸರೆತ್ತಿ ಹೇಳಿರುವುದರಿಂದ ತಿಳಿದುಬರುವುದೇನೆಂದರೆ, ದೈವಿಕ ಗ್ರಂಥಗಳನ್ನು ಹೊಂದಿರುವ ಯಹೂದಿಗಳು ಮತ್ತು ಕ್ರೈಸ್ತರು ಇಸ್ಲಾಂ ಧರ್ಮವನ್ನು ಸ್ವೀಕರಿಸಿ ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅನುಸರಿಸುವುದು ಕಡ್ಡಾಯವಾಗಿರುವಾಗ, ದೈವಿಕ ಗ್ರಂಥಗಳನ್ನು ಹೊಂದಿರದ ಇತರ ಧರ್ಮದವರು ಅದಕ್ಕೆ ಇನ್ನೂ ಹೆಚ್ಚು ಅರ್ಹರಾಗಿದ್ದಾರೆ.