- ಸಜ್ಜನರೊಡನೆ ಸಹವಾಸ ಮಾಡಲು ಮತ್ತು ಅವರನ್ನೇ ಆಯ್ಕೆ ಮಾಡಲು ಆದೇಶಿಸಲಾಗಿದೆ. ದುಷ್ಟ ಜನರ ಸಹವಾಸವನ್ನು ನಿಷೇಧಿಸಲಾಗಿದೆ.
- ಇಲ್ಲಿ ರಕ್ತ ಸಂಬಂಧಿಗಳನ್ನು ಬಿಟ್ಟು ಸ್ನೇಹಿತರ ಬಗ್ಗೆ ವಿಶೇಷವಾಗಿ ತಿಳಿಸಲಾಗಿದೆ. ಏಕೆಂದರೆ, ಸ್ನೇಹಿತನನ್ನು ಆಯ್ಕೆ ಮಾಡುವುದು ನೀವೇ. ನಿಮ್ಮ ಸಹೋದರ ಮತ್ತು ರಕ್ತ ಸಂಬಂಧಿಯ ಆಯ್ಕೆಯು ನಿಮ್ಮ ನಿಯಂತ್ರಣದಲ್ಲಿಲ್ಲ.
- ಸ್ನೇಹಿತರನ್ನು ಸ್ವೀಕರಿಸುವುದು ಸರಿಯಾಗಿ ಆಲೋಚನೆ ಮಾಡಿದ ನಂತರವಾಗಿರಬೇಕಾದುದು ಅತ್ಯಾವಶ್ಯಕ.
- ಮನುಷ್ಯನು ಸತ್ಯವಿಶ್ವಾಸಿಗಳ ಸಹವಾಸದಿಂದ ತನ್ನ ಧರ್ಮವನ್ನು ಪ್ರಬಲಗೊಳಿಸುತ್ತಾನೆ ಮತ್ತು ದುಷ್ಟರ ಸಹವಾಸದಿಂದ ಅದನ್ನು ದುರ್ಬಲಗೊಳಿಸುತ್ತಾನೆ.