- ಸತ್ಯನಿಷೇಧಿಗಳನ್ನು ಮತ್ತು ದುಷ್ಕರ್ಮಿಗಳನ್ನು ಅನುಕರಿಸಬಾರದೆಂದು ಈ ಹದೀಸ್ ಎಚ್ಚರಿಸುತ್ತದೆ.
- ಸಜ್ಜನರನ್ನು ಅನುಕರಿಸಲು ಮತ್ತು ಅವರ ಮಾದರಿಯನ್ನು ಸ್ವೀಕರಿಸಲು ಈ ಹದೀಸ್ ಒತ್ತಾಯಿಸುತ್ತದೆ.
- ಬಾಹ್ಯ ಅನುಕರಣೆಯು ಆಂತರಿಕ ಪ್ರೀತಿಗೆ ಕಾರಣವಾಗುತ್ತದೆ.
- ಮನುಷ್ಯನ ಪಾಪ ಮತ್ತು ಶಿಕ್ಷೆಯು ಅವನು ಮಾಡುವ ಅನುಕರಣೆಯ ವಿಧ ಮತ್ತು ತೀವ್ರತೆಗೆ ಅನುಗುಣವಾಗಿರುತ್ತದೆ.
- ಸತ್ಯನಿಷೇಧಿಗಳ ಧಾರ್ಮಿಕ ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು ಅನುಕರಿಸುವುದನ್ನು ಈ ಹದೀಸ್ ವಿರೋಧಿಸುತ್ತದೆ. ಆದರೆ ಅವರ ಧರ್ಮಕ್ಕೆ ಸೀಮಿತವಲ್ಲದ ಇತರ ಕಾರ್ಯಗಳನ್ನು ಕಲಿಯುವುದು—ಉದಾಹರಣೆಗೆ, ಕರಕುಶಲ ತರಬೇತಿ—ಈ ವಿರೋಧದಲ್ಲಿ ಒಳಪಡುವುದಿಲ್ಲ.