- ಅಲೀ ಬಿನ್ ಅಬೂ ತಾಲಿಬ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರವರ ಶ್ರೇಷ್ಠತೆಯನ್ನು ಮತ್ತು ಅವರನ್ನು ಅಲ್ಲಾಹು ಮತ್ತು ಅವನ ಸಂದೇಶವಾಹಕರು ಪ್ರೀತಿಸುತ್ತಾರೆ ಮತ್ತು ಅವರು ಅಲ್ಲಾಹು ಮತ್ತು ಅವನ ಸಂದೇಶವಾಹಕರನ್ನು ಪ್ರೀತಿಸುತ್ತಾರೆಂದು ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಾಕ್ಷಿ ನುಡಿದರೆಂದು ತಿಳಿಸಲಾಗಿದೆ.
- ಒಳಿತಿನ ವಿಷಯದಲ್ಲಿ ಸಹಾಬಿಗಳಿಗಿದ್ದ ಉತ್ಸಾಹ ಮತ್ತು ಅದಕ್ಕಾಗಿ ಅವರು ಸ್ಪರ್ಧಿಸುತ್ತಿದ್ದುದನ್ನು ತಿಳಿಸಲಾಗಿದೆ.
- ಯುದ್ಧ ಮಾಡುವಾಗ ಶಿಷ್ಟಾಚಾರ ಪಾಲಿಸುವುದು ಮತ್ತು ಅನಾವಶ್ಯಕ ಮಾತುಗಳನ್ನು ಹಾಗೂ ಕಿರಿಕಿರಿಗೊಳಿಸುವ ಶಬ್ದಗಳನ್ನು ಬಿಟ್ಟುಬಿಡುವುದು ಶಾಸ್ತ್ರೋಕ್ತ ನಿಯಮವಾಗಿದೆ.
- ಯಹೂದಿಗಳ ವಿರುದ್ಧ ಗೆಲುವು ಸಾಧಿಸುತ್ತೀರಿ ಎಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿದ್ದು ಮತ್ತು ಅಲ್ಲಾಹನ ಅಪ್ಪಣೆ ಪ್ರಕಾರ ಅವರ ಕೈಯಿಂದ ಅಲೀ ಬಿನ್ ಅಬೂ ತಾಲಿಬ್ ರವರ ಕಣ್ಣು ಗುಣವಾಗಿದ್ದು ಪ್ರವಾದಿತ್ವದ ಪುರಾವೆಗಳಾಗಿವೆ.
- ಜನರು ಇಸ್ಲಾಂ ಸ್ವೀಕರಿಸಬೇಕು ಎನ್ನುವುದು ಜಿಹಾದ್‌ನ ಅತಿದೊಡ್ಡ ಗುರಿಯಾಗಿದೆ.
- ಇಸ್ಲಾಂ ಧರ್ಮದ ಕಡೆಗೆ ಕರೆಯುವುದು ಹಂತ ಹಂತವಾಗಿರುತ್ತದೆ. ಮೊತ್ತಮೊದಲು, ಎರಡು ಸಾಕ್ಷ್ಯವಚನಗಳನ್ನು ಉಚ್ಛರಿಸುವ ಮೂಲಕ ಇಸ್ಲಾಂ ಧರ್ಮಕ್ಕೆ ಪ್ರವೇಶಿಸಬೇಕೆಂದು ಸತ್ಯನಿಷೇಧಿಯೊಡನೆ ವಿನಂತಿಸಲಾಗುತ್ತದೆ. ನಂತರ, ಅದರ ಬಳಿಕ ಇಸ್ಲಾಂ ಧರ್ಮದ ಕಡ್ಡಾಯ ಕಾರ್ಯಗಳನ್ನು ಆದೇಶಿಸಲಾಗುತ್ತದೆ.
- ಇಸ್ಲಾಂ ಧರ್ಮಕ್ಕೆ ಕರೆಯುವುದರ ಶ್ರೇಷ್ಠತೆಯನ್ನು ಮತ್ತು ಅದರಿಂದ ಕರೆಯುವವರಿಗೆ ಮತ್ತು ಕರೆ ಸ್ವೀಕರಿಸುವವರಿಗೆ ಉಂಟಾಗುವ ಒಳಿತನ್ನು ತಿಳಿಸಲಾಗಿದೆ. ಕರೆ ಸ್ವೀಕರಿಸುವವನು ಅದರಿಂದ ಸನ್ಮಾರ್ಗವನ್ನು ಪಡೆಯುತ್ತಾನೆ ಮತ್ತು ಕರೆಯುವವನಿಗೆ ಮಹಾ ಪ್ರತಿಫಲವು ದೊರೆಯುತ್ತದೆ.