- ಪ್ರಯಾಣ ಮಾಡುವಾಗ ಸವಾರಿಯ ಹಿಂಬಾಗದಲ್ಲಿ ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರನ್ನು ಕೂರಿಸಿದ್ದು ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿನಯವನ್ನು ಸೂಚಿಸುತ್ತದೆ.
- ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬೋಧನಾ ಶೈಲಿಯನ್ನು ಈ ಹದೀಸ್ ತಿಳಿಸುತ್ತದೆ. ತಾನು ಹೇಳುವ ವಿಷಯಕ್ಕೆ ಮುಆದ್‌ರ ಗಮನವನ್ನು ಪೂರ್ತಿಯಾಗಿ ಸೆಳೆಯುವುದಕ್ಕಾಗಿ ಅವರು ಪದೇ ಪದೇ ಕರೆಯುತ್ತಾರೆ.
- "ಲಾ ಇಲಾಹ ಇಲ್ಲಲ್ಲಾಹ್ ಮುಹಮ್ಮದ್ ರಸೂಲುಲ್ಲಾಹ್" ಎಂದು ಉಚ್ಛರಿಸುವವನು ಪ್ರಾಮಾಣಿಕವಾಗಿ ಮತ್ತು ಪೂರ್ಣ ಖಾತ್ರಿಯಿಂದ, ಯಾವುದೇ ಕಾಪಟ್ಯ ಅಥವಾ ಸಂಶಯವಿಲ್ಲದೆ ಉಚ್ಛರಿಸುವುದು ಅದರ ನಿಬಂಧನೆಯಾಗಿದೆ.
- ತೌಹೀದ್‌ನ ಜನರು ನರಕದಲ್ಲಿ ಶಾಶ್ವತವಾಗಿ ಉಳಿಯುವುದಿಲ್ಲ. ಅವರು ಮಾಡಿದ ಕೆಲವು ಪಾಪಗಳಿಗಾಗಿ ನರಕವನ್ನು ಪ್ರವೇಶಿಸಬೇಕಾಗಿ ಬಂದರೂ ಪಾಪಗಳಿಂದ ಶುದ್ಧರಾದ ನಂತರ ಅವರು ಅಲ್ಲಿಂದ ಹೊರ ಬರುತ್ತಾರೆ.
- ಎರಡು ಸಾಕ್ಷಿವಚನಗಳನ್ನು ಪ್ರಾಮಾಣಿಕವಾಗಿ ಉಚ್ಛರಿಸುವುದರ ಶ್ರೇಷ್ಠತೆಯನ್ನು ಈ ಹದೀಸ್ ತಿಳಿಸುತ್ತದೆ.
- ಹಾನಿ ಉಂಟಾಗಬಹುದೆಂಬ ಭಯವಿದ್ದರೆ ಕೆಲವು ಸಂದರ್ಭಗಳಲ್ಲಿ ಒಂದು ಹದೀಸನ್ನು ಹೇಳುವುದನ್ನು ಬಿಟ್ಟುಬಿಡಬಹುದೆಂದು ಈ ಹದೀಸ್ ತಿಳಿಸುತ್ತದೆ.