- ಒಳಿತನ್ನು ತೋರಿಸಿಕೊಡಲು ಈ ಹದೀಸ್ ಪ್ರೇರೇಪಿಸುತ್ತದೆ.
- ಒಳಿತು ಮಾಡಲು ಪ್ರೋತ್ಸಾಹಿಸುವುದು ಮುಸ್ಲಿಂ ಸಮುದಾಯದ ಒಗ್ಗಟ್ಟು ಮತ್ತು ಏಕೀಕರಣಕ್ಕೆ ಕಾರಣವಾಗುತ್ತದೆ.
- ಸರ್ವಶಕ್ತನಾದ ಅಲ್ಲಾಹನ ಮಹಾ ಉದಾರತೆಯನ್ನು ಈ ಹದೀಸ್ ತಿಳಿಸುತ್ತದೆ.
- ಈ ಹದೀಸ್ ಒಂದು ಸಾಮಾನ್ಯ ನಿಯಮವನ್ನು ಹೊಂದಿದ್ದು, ಒಳಿತಿನ ಕಾರ್ಯಗಳೆಲ್ಲವೂ ಅದರಲ್ಲಿ ಒಳಪಡುತ್ತವೆ.
- ಅಗತ್ಯದಲ್ಲಿರುವವನ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗದಿದ್ದರೆ, ಅದನ್ನು ಈಡೇರಿಸುವವರನ್ನು ತೋರಿಸಿಕೊಡಬೇಕೆಂದು ಈ ಹದೀಸ್ ತಿಳಿಸುತ್ತದೆ.