- ಇತರರನ್ನು ಸನ್ಮಾರ್ಗಕ್ಕೆ ಕರೆಯುವುದಕ್ಕೆ—ಅದು ಸ್ವಲ್ಪವಾದರೂ ಹೆಚ್ಚಾದರೂ—ಅದಕ್ಕೆ ಶ್ರೇಷ್ಠತೆಯಿದೆ ಮತ್ತು ಕರ್ಮವೆಸಗುವವನು ಪಡೆಯುವಷ್ಟೇ ಪ್ರತಿಫಲವನ್ನು ಕರೆಯುವವನೂ ಪಡೆಯುತ್ತಾನೆಂದು ತಿಳಿಸಲಾಗಿದೆ. ಇದು ಅಲ್ಲಾಹನ ಮಹಾ ಉದಾರತೆ ಮತ್ತು ಕರುಣೆಯ ಸಂಪೂರ್ಣತೆಯಾಗಿದೆ.
- ಇತರರನ್ನು ದುರ್ಮಾರ್ಗಕ್ಕೆ ಕರೆಯುವುದರ—ಅದು ಸ್ವಲ್ಪವಾದರೂ ಹೆಚ್ಚಾದರೂ—ಅಪಾಯವನ್ನು ಮತ್ತು ಕರ್ಮವೆಸಗುವವನು ಹೊರುವಷ್ಟೇ ಪಾಪಭಾರವನ್ನು ಕರೆಯುವವನೂ ಹೊರುತ್ತಾನೆಂದು ತಿಳಿಸಲಾಗಿದೆ.
- ಪ್ರತಿಫಲಗಳು ಕರ್ಮಗಳಿಗೆ ತಕ್ಕಂತಿದೆ. ಒಳಿತಿಗೆ ಕರೆಯುವವನು ಅದನ್ನು ಮಾಡುವವನ ಪ್ರತಿಫಲವನ್ನು ಪಡೆದರೆ, ಕೆಡುಕಿಗೆ ಕರೆಯುವವನು ಅದನ್ನು ಮಾಡುವವನು ಪಡೆಯುವ ಪಾಪವನ್ನು ಪಡೆಯುತ್ತಾನೆ.
- ಜನರು ನೋಡುವ ರೀತಿಯಲ್ಲಿ ಸಾರ್ವಜನಿಕವಾಗಿ ಪಾಪಗಳನ್ನು ಮಾಡಿದರೆ ಅದನ್ನು ಜನರು ಅನುಸರಿಸಬಹುದೆಂಬ ಬಗ್ಗೆ ಮುಸಲ್ಮಾನನು ಎಚ್ಚರದಿಂದಿರಬೇಕು. ಏಕೆಂದರೆ, ಅದರಿಂದ ಅವನನ್ನು ಅನುಕರಿಸುವವನಷ್ಟೇ ಪಾಪವನ್ನು ಇವನೂ ಹೊರಬೇಕಾಗುತ್ತದೆ. ಅವನು ಅದಕ್ಕಾಗಿ ಪ್ರೋತ್ಸಾಹಿಸದಿದ್ದರೂ ಸಹ.