- ಸಮಾಜದ ಉಳಿವು ಮತ್ತು ರಕ್ಷಣೆಯಲ್ಲಿ ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ವಿರೋಧಿಸುವುದು ಮಹತ್ವದ ಪಾತ್ರ ವಹಿಸುತ್ತದೆ.
- ವಿಷಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಉದಾಹರಣೆಗಳನ್ನು ಹೇಳುವುದು ಬೋಧನೆಯ ಒಂದು ಶೈಲಿಯಾಗಿದೆ.
- ಬಹಿರಂಗವಾಗಿರುವ ಕೆಡುಕನ್ನು ತಡೆಯದೆ ಅಸಡ್ಡೆ ತೋರಿದರೆ, ಅದು ಎಲ್ಲರೂ ಅನುಭವಿಸಬೇಕಾದಂತಹ ಹಾನಿಗೆ ಕಾರಣವಾಗಬಹುದು.
- ದುರುಳರು ಭೂಮಿಯಲ್ಲಿ ಕಿಡಿಗೇಡಿತನ ಮಾಡುವುದನ್ನು ತಡೆಯದಿದ್ದರೆ ಅದು ಸಂಪೂರ್ಣ ಸಮಾಜ ನಾಶಕ್ಕೆ ಕಾರಣವಾಗಬಹುದು.
- ಕರ್ಮವನ್ನು ಮಾಡುವ ಉದ್ದೇಶವು ಒಳ್ಳೆಯದಾಗಿದ್ದರೂ ಮಾಡುವ ವಿಧಾನ ತಪ್ಪಾಗಿದ್ದರೆ ಅದು ಸತ್ಕರ್ಮವಾಗುವುದಿಲ್ಲ.
- ಮುಸ್ಲಿಂ ಸಮಾಜದ ಹೊಣೆಗಾರಿಕೆ ಎಲ್ಲರ ಮೇಲಿದೆ. ಯಾವುದೋ ಒಬ್ಬ ನಿರ್ದಿಷ್ಟ ವ್ಯಕ್ತಿಯ ಮೇಲೆ ಮಾತ್ರವಲ್ಲ.
- ಕೆಲವೊಂದು ಜನರು ಮಾಡುವ ತಪ್ಪನ್ನು ಇತರರು ವಿರೋಧಿಸದಿದ್ದರೆ ಸಾಮಾನ್ಯವಾಗಿ ಎಲ್ಲರಿಗೂ ಶಿಕ್ಷೆಯನ್ನು ಅನುಭವಿಸಬೇಕಾಗಿ ಬರುತ್ತದೆ.
- ಕೆಡುಕಿನ ಜನರು ಕಪಟವಿಶ್ವಾಸಿಗಳಂತೆ ತಮ್ಮ ಕೆಡುಕನ್ನು ಒಳಿತಿನ ವೇಷ ತೊಡಿಸಿ ಸಮಾಜಕ್ಕೆ ತೋರಿಸುತ್ತಾರೆ.