- ಈ ಹದೀಸ್ ಕೆಡುಕುಗಳನ್ನು ಬದಲಾಯಿಸುವ ವಿವಿಧ ಹಂತಗಳನ್ನು ವಿವರಿಸುವ ಮೂಲ ಅಂಶವಾಗಿದೆ.
- ಕೆಡುಕುಗಳನ್ನು ತಡೆಯುವುದು ಹಂತ ಹಂತವಾಗಿರಬೇಕೆಂದು ಈ ಹದೀಸ್ ಆದೇಶಿಸುತ್ತದೆ. ಪ್ರತಿಯೊಬ್ಬನೂ ಅವನ ಶಕ್ತಿ-ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಡುಕುಗಳನ್ನು ತಡೆಯಬೇಕು.
- ಕೆಡುಕುಗಳನ್ನು ತಡೆಯುವುದು ಧರ್ಮದ ಶ್ರೇಷ್ಠ ಅಂಗವಾಗಿದ್ದು, ಯಾರಿಗೂ ಅದರಲ್ಲಿ ವಿನಾಯಿತಿ ನೀಡಲಾಗಿಲ್ಲ. ಪ್ರತಿಯೊಬ್ಬ ಮುಸಲ್ಮಾನನೂ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಅದನ್ನು ಕಡ್ಡಾಯವಾಗಿ ನಿರ್ವಹಿಸಬೇಕು.
- ಒಳಿತನ್ನು ಆದೇಶಿಸುವುದು ಮತ್ತು ಕೆಡುಕನ್ನು ತಡೆ ಯುವುದು ಸತ್ಯವಿಶ್ವಾಸದ ಲಕ್ಷಣವಾಗಿದೆ. ಸತ್ಯವಿಶ್ವಾಸವು ಹೆಚ್ಚಾಗುತ್ತದೆ ಮತ್ತು ಕಡಿಮೆಯಾಗುತ್ತದೆ.
- ಕೆಡುಕನ್ನು ತಡೆಯುವ ಮೊದಲು, ಅದು ಕೆಡುಕು ಎಂಬ ಸ್ಪಷ್ಟ ಜ್ಞಾನವನ್ನು ಹೊಂದಿರಬೇಕಾದ ಷರತ್ತು ಇದೆ.
- ಕೆಡುಕನ್ನು ಬದಲಾಯಿಸುವಾಗ ಅದು ಅದಕ್ಕಿಂತಲೂ ದೊಡ್ಡ ಕೆಡುಕಿಗೆ ಕಾರಣವಾಗಬಾರದೆಂಬ ಷರತ್ತು ಇದೆ.
- ಕೆಡುಕನ್ನು ತಡೆಯುವುದಕ್ಕೆ ಕೆಲವು ಶಿಷ್ಟಾಚಾರಗಳು ಮತ್ತು ಷರತ್ತುಗಳಿದ್ದು, ಮುಸಲ್ಮಾನರು ಅವುಗಳನ್ನು ಅತ್ಯಗತ್ಯವಾಗಿ ಕಲಿಯಬೇಕು.
- ಕೆಡುಕನ್ನು ತಡೆಯುವುದಕ್ಕೆ ಧಾರ್ಮಿಕ ನೀತಿಯ ಅಗತ್ಯವಿದೆ. ಹಾಗೆಯೇ ಜ್ಞಾನ ಮತ್ತು ಒಳನೋಟದ ಅಗತ್ಯವೂ ಇದೆ.
- ಹೃದಯದಲ್ಲೂ ಕೂಡ ಆ ಕೆಡುಕನ್ನು ಕೆಡುಕೆಂದು ಭಾವಿಸದಿರುವುದು ಸತ್ಯವಿಶ್ವಾಸದ ದೌರ್ಬಲ್ಯವನ್ನು ಸೂಚಿಸುತ್ತದೆ.