- ದಾಸರು ಕಡ್ಡಾಯವಾಗಿ ನಿರ್ವಹಿಸಬೇಕಾದ ಅಲ್ಲಾಹನ ಹಕ್ಕನ್ನು ಈ ಹದೀಸ್ ವಿವರಿಸುತ್ತದೆ. ಅದೇನೆಂದರೆ ಅವರು ಅವನನ್ನು ಮಾತ್ರ ಆರಾಧಿಸಬೇಕು ಮತ್ತು ಅವನೊಂದಿಗೆ ಯಾರನ್ನೂ ಸಹಭಾಗಿಯಾಗಿ ಮಾಡಬಾರದು.
- ಅದೇ ರೀತಿ, ಅಲ್ಲಾಹು ತನ್ನ ಅನುಗ್ರಹ ಮತ್ತು ಔದಾರ್ಯದಿಂದ ಕಡ್ಡಾಯವಾಗಿ ನಿರ್ವಹಿಸುವ ದಾಸರ ಹಕ್ಕನ್ನು ಕೂಡ ಈ ಹದೀಸ್ ವಿವರಿಸುತ್ತದೆ. ಅದೇನೆಂದರೆ ಅವರನ್ನು ಸ್ವರ್ಗಕ್ಕೆ ಪ್ರವೇಶ ಮಾಡಿಸುವುದು ಮತ್ತು ಅವರನ್ನು ಶಿಕ್ಷಿಸದಿರುವುದು.
- ಅಲ್ಲಾಹನೊಂದಿಗೆ ಏನನ್ನೂ ಸಹಭಾಗಿಯನ್ನಾಗಿ ಮಾಡದ ಏಕದೇವ ವಿಶ್ವಾಸಿಗಳು ಸ್ವರ್ಗವನ್ನು ಪಡೆಯುತ್ತಾರೆ ಎಂಬ ಮಹಾ ಸುವಾರ್ತೆಯನ್ನು ಈ ಹದೀಸ್ ತಿಳಿಸುತ್ತದೆ.
- ಜ್ಞಾನವನ್ನು ಬಚ್ಚಿಟ್ಟ ಪಾಪಕ್ಕೆ ಗುರಿಯಾಗದಿರಲು ನಿಧನರಾಗುವುದಕ್ಕೆ ಮುಂಚೆ ಮುಆದ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ಈ ಹದೀಸನ್ನು ಜನರಿಗೆ ತಿಳಿಸಿಕೊಟ್ಟರು.
- ಕೆಲವು ರೀತಿಯ ಹದೀಸ್‌ಗಳನ್ನು ಅವುಗಳ ಅರ್ಥವನ್ನು ಸರಿಯಾಗಿ ಗ್ರಹಿಸಲಾಗದ ಕೆಲವೊಂದು ಜನರಿಗೆ ತಿಳಿಸಿಕೊಡಬಾರದು ಎಂದು ಈ ಹದೀಸ್ ಸೂಚಿಸುತ್ತದೆ. ಅಂದರೆ, ಕರ್ಮ ಮಾಡಬೇಕೆಂಬ ಆಜ್ಞೆಯಿಲ್ಲದ ಮತ್ತು ಧಾರ್ಮಿಕವಾದ ಯಾವುದೇ ಶಿಕ್ಷೆಯ ಬಗ್ಗೆ ಉಲ್ಲೇಖವಿರದ ಹದೀಸ್‌ಗಳು.
- ಏಕದೇವ ವಿಶ್ವಾಸಿಗಳ ಪೈಕಿ ಪಾಪವೆಸಗಿದವರ ವಿಧಿಯು ಅಲ್ಲಾಹನ ಇಚ್ಚೆಗೆ ಒಳಪಟ್ಟಿದೆ. ಅವನು ಅವರನ್ನು ಶಿಕ್ಷಿಸಬಹುದು ಅಥವಾ ಅವರನ್ನು ಕ್ಷಮಿಸಬಹುದು. ಶಿಕ್ಷೆಗೆ ಒಳಗಾದವರು ಶಿಕ್ಷೆಯ ನಂತರ ಸ್ವರ್ಗಕ್ಕೆ ಹೋಗುತ್ತಾರೆ.