/ ಒಬ್ಬ ವ್ಯಕ್ತಿ ಮನೆಯನ್ನು ಪ್ರವೇಶಿಸುವಾಗ ಮತ್ತು ಆಹಾರ ಸೇವಿಸುವಾಗ ಅಲ್ಲಾಹನನ್ನು ಸ್ಮರಿಸಿದರೆ, ಶೈತಾನನು ಹೇಳುತ್ತಾನೆ: ನಿಮಗೆ ಇಲ್ಲಿ ರಾತ್ರಿವಾಸವಿಲ್ಲ ಮತ್ತು ರಾತ್ರಿಭೋಜನವಿಲ್ಲ...

ಒಬ್ಬ ವ್ಯಕ್ತಿ ಮನೆಯನ್ನು ಪ್ರವೇಶಿಸುವಾಗ ಮತ್ತು ಆಹಾರ ಸೇವಿಸುವಾಗ ಅಲ್ಲಾಹನನ್ನು ಸ್ಮರಿಸಿದರೆ, ಶೈತಾನನು ಹೇಳುತ್ತಾನೆ: ನಿಮಗೆ ಇಲ್ಲಿ ರಾತ್ರಿವಾಸವಿಲ್ಲ ಮತ್ತು ರಾತ್ರಿಭೋಜನವಿಲ್ಲ...

ಜಾಬಿರ್ ಬಿನ್ ಅಬ್ದುಲ್ಲಾ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೀಗೆ ಹೇಳುವುದನ್ನು ಅವರು ಕೇಳಿದ್ದಾರೆ: "ಒಬ್ಬ ವ್ಯಕ್ತಿ ಮನೆಯನ್ನು ಪ್ರವೇಶಿಸುವಾಗ ಮತ್ತು ಆಹಾರ ಸೇವಿಸುವಾಗ ಅಲ್ಲಾಹನನ್ನು ಸ್ಮರಿಸಿದರೆ, ಶೈತಾನನು ಹೇಳುತ್ತಾನೆ: ನಿಮಗೆ ಇಲ್ಲಿ ರಾತ್ರಿವಾಸವಿಲ್ಲ ಮತ್ತು ರಾತ್ರಿಭೋಜನವಿಲ್ಲ. ಆದರೆ ಅವನು ಮನೆಯನ್ನು ಪ್ರವೇಶಿಸುವಾಗ ಅಲ್ಲಾಹನನ್ನು ಸ್ಮರಿಸದಿದ್ದರೆ, ಶೈತಾನನು ಹೇಳುತ್ತಾನೆ: ನೀವು ರಾತ್ರಿವಾಸವನ್ನು ಪಡೆದಿದ್ದೀರಿ. ಅವನು ಆಹಾರ ಸೇವಿಸುವಾಗ ಅಲ್ಲಾಹನನ್ನು ಸ್ಮರಿಸದಿದ್ದರೆ ಶೈತಾನನು ಹೇಳುತ್ತಾನೆ: ನೀವು ರಾತ್ರಿವಾಸವನ್ನು ಮತ್ತು ರಾತ್ರಿಭೋಜನವನ್ನು ಪಡೆದಿದ್ದೀರಿ."
رواه مسلم

ವಿವರಣೆ

ಮನೆಯೊಳಗೆ ಪ್ರವೇಶಿಸುವಾಗ ಮತ್ತು ಆಹಾರ ಸೇವಿಸುವ ಮೊದಲು ಅಲ್ಲಾಹನನ್ನು ಸ್ಮರಿಸಬೇಕೆಂದು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಆದೇಶಿಸಿದ್ದಾರೆ. ಅದೇಕೆಂದರೆ, ಮನೆಯನ್ನು ಪ್ರವೇಶಿಸುವಾಗ ಮತ್ತು ಆಹಾರ ಸೇವಿಸುವಾಗ 'ಬಿಸ್ಮಿಲ್ಲಾ' ಎಂದು ಅಲ್ಲಾಹನನ್ನು ಸ್ಮರಿಸಿದರೆ, ಶೈತಾನನು ತನ್ನ ಅನುಯಾಯಿಗಳಿಗೆ ಹೇಳುತ್ತಾನೆ: ಈ ಮನೆಯಲ್ಲಿ ನಿಮಗೆ ರಾತ್ರಿ ವಾಸ ಮಾಡುವ ಅಥವಾ ರಾತ್ರಿ ಭೋಜನ ಮಾಡುವ ಭಾಗ್ಯವಿಲ್ಲ. ಏಕೆಂದರೆ, ಈ ಮನೆಯ ಯಜಮಾನನು ಅಲ್ಲಾಹನ ಸ್ಮರಣೆಯ ಮೂಲಕ ಇದನ್ನು ನಿಮ್ಮಿಂದ ಭದ್ರಪಡಿಸಿದ್ದಾನೆ. ಆದರೆ ಅವನು ಮನೆಯನ್ನು ಪ್ರವೇಶಿಸುವಾಗ ಅಥವಾ ಆಹಾರ ಸೇವಿಸುವಾಗ ಅಲ್ಲಾಹನನ್ನು ಸ್ಮರಿಸದಿದ್ದರೆ, ಶೈತಾನನು ತನ್ನ ಅನುಯಾಯಿಗಳಿಗೆ ಹೇಳುತ್ತಾನೆ: ನೀವು ಈ ಮನೆಯಲ್ಲಿ ರಾತ್ರಿವಾಸವನ್ನು ಮತ್ತು ರಾತ್ರಿಭೋಜನವನ್ನು ಪಡೆದಿದ್ದೀರಿ.

Hadeeth benefits

  1. ಮನೆಯನ್ನು ಪ್ರವೇಶಿಸುವಾಗ ಮತ್ತು ಆಹಾರ ಸೇವಿಸುವಾಗ ಅಲ್ಲಾಹನನ್ನು ಸ್ಮರಿಸುವುದು ಅಪೇಕ್ಷಣೀಯವಾಗಿದೆ. ಏಕೆಂದರೆ, ಶೈತಾನನು ಮನೆಗಳಲ್ಲಿ ವಾಸಿಸುತ್ತಾನೆ ಮತ್ತು ಮನೆಯಲ್ಲಿರುವವರು ಅಲ್ಲಾಹನ ಹೆಸರನ್ನು ಸ್ಮರಿಸದಿದ್ದರೆ ಅವರ ಆಹಾರವನ್ನು ಸೇವಿಸುತ್ತಾನೆ.
  2. ಶೈತಾನನು ಮನುಷ್ಯನನ್ನು ಅವನ ಕೆಲಸ, ವ್ಯವಹಾರ ಹಾಗೂ ಇತರೆಲ್ಲಾ ವಿಷಯಗಳಲ್ಲೂ ಸದಾ ಗಮನಿಸುತ್ತಾ ಇರುತ್ತಾನೆ. ಅವನು ಅಲ್ಲಾಹನ ಬಗ್ಗೆ ನಿರ್ಲಕ್ಷ್ಯನಾಗುವಾಗ ತನ್ನ ಕೆಲಸವನ್ನು ಸಾಧಿಸಿ ಬಿಡುತ್ತಾನೆ.
  3. ಅಲ್ಲಾಹನ ಸ್ಮರಣೆಯು ಶೈತಾನನನ್ನು ಹಿಮ್ಮೆಟ್ಟಿಸುತ್ತದೆ.
  4. ಪ್ರತಿಯೊಬ್ಬ ಶೈತಾನನಿಗೂ ಅನುಯಾಯಿಗಳು ಮತ್ತು ಸಹಾಯಕರಿದ್ದಾರೆ. ಅವರು ಆತನ ಮಾತುಗಳನ್ನು ಕೇಳಿ ಸಂತೋಷಪಡುತ್ತಾರೆ ಮತ್ತು ಆತನ ಆಜ್ಞೆಗಳನ್ನು ಅನುಸರಿಸುತ್ತಾರೆ.