/ ನಿಮ್ಮಲ್ಲೊಬ್ಬರು ಮಸೀದಿಯನ್ನು ಪ್ರವೇಶಿಸುವಾಗ, 'ಅಲ್ಲಾಹುಮ್ಮಫ್ತಹ್ ಲೀ ಅಬ್ವಾಬ ರಹ್ಮತಿಕ್' (ಓ ಅಲ್ಲಾಹ್! ನಿನ್ನ ದಯೆಯ ಬಾಗಿಲುಗಳನ್ನು ನನಗೆ ತೆರೆದುಕೊಡು) ಎಂದು ಹೇಳಬೇಕು ಮತ್ತು ಹೊರಬರುವಾಗ, 'ಅಲ್ಲಾಹುಮ್ಮ ಇನ್ನೀ ಅಸ್‌ಅಲುಕ ಮಿನ್ ಫದ್ಲಿಕ್' (ಓ ಅಲ್ಲಾಹ್! ನಿನ್ನ ಔದಾರ್ಯದಿಂದ ನಾನು ನಿನ್ನ...

ನಿಮ್ಮಲ್ಲೊಬ್ಬರು ಮಸೀದಿಯನ್ನು ಪ್ರವೇಶಿಸುವಾಗ, 'ಅಲ್ಲಾಹುಮ್ಮಫ್ತಹ್ ಲೀ ಅಬ್ವಾಬ ರಹ್ಮತಿಕ್' (ಓ ಅಲ್ಲಾಹ್! ನಿನ್ನ ದಯೆಯ ಬಾಗಿಲುಗಳನ್ನು ನನಗೆ ತೆರೆದುಕೊಡು) ಎಂದು ಹೇಳಬೇಕು ಮತ್ತು ಹೊರಬರುವಾಗ, 'ಅಲ್ಲಾಹುಮ್ಮ ಇನ್ನೀ ಅಸ್‌ಅಲುಕ ಮಿನ್ ಫದ್ಲಿಕ್' (ಓ ಅಲ್ಲಾಹ್! ನಿನ್ನ ಔದಾರ್ಯದಿಂದ ನಾನು ನಿನ್ನ...

ಅಬೂ ಹುಮೈದ್ ಅಥವಾ ಅಬೂ ಉಸೈದ್ ರಿಂದ ವರದಿ. ಅವರು ಹೇಳಿದರು: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು: "ನಿಮ್ಮಲ್ಲೊಬ್ಬರು ಮಸೀದಿಯನ್ನು ಪ್ರವೇಶಿಸುವಾಗ, 'ಅಲ್ಲಾಹುಮ್ಮಫ್ತಹ್ ಲೀ ಅಬ್ವಾಬ ರಹ್ಮತಿಕ್' (ಓ ಅಲ್ಲಾಹ್! ನಿನ್ನ ದಯೆಯ ಬಾಗಿಲುಗಳನ್ನು ನನಗೆ ತೆರೆದುಕೊಡು) ಎಂದು ಹೇಳಬೇಕು ಮತ್ತು ಹೊರಬರುವಾಗ, 'ಅಲ್ಲಾಹುಮ್ಮ ಇನ್ನೀ ಅಸ್‌ಅಲುಕ ಮಿನ್ ಫದ್ಲಿಕ್' (ಓ ಅಲ್ಲಾಹ್! ನಿನ್ನ ಔದಾರ್ಯದಿಂದ ನಾನು ನಿನ್ನಲ್ಲಿ ಬೇಡುತ್ತೇನೆ) ಎಂದು ಹೇಳಬೇಕು."
رواه مسلم

ವಿವರಣೆ

ಮಸೀದಿಯನ್ನು ಪ್ರವೇಶಿಸುವಾಗ ಹೇಳಬೇಕಾದ ಪ್ರಾರ್ಥನೆಯನ್ನು ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಲ್ಲಿ ಕಲಿಸಿಕೊಡುತ್ತಿದ್ದಾರೆ. ಅದು ಹೀಗಿದೆ: "ಅಲ್ಲಾಹುಮ್ಮಫ್ತಹ್ ಲೀ ಅಬ್ವಾಬ ರಹ್ಮತಿಕ್." ಇಲ್ಲಿ ಅಲ್ಲಾಹನೊಂದಿಗೆ ಅವನ ದಯೆಯ ಬಾಗಿಲುಗಳನ್ನು ತೆರೆದುಕೊಡುವಂತೆ ಬೇಡಲಾಗುತ್ತಿದೆ. ಮಸೀದಿಯಿಂದ ಹೊರ ಬರುವಾಗ ಈ ಪ್ರಾರ್ಥನೆಯನ್ನು ಹೇಳಬೇಕಾಗಿದೆ: "ಅಲ್ಲಾಹುಮ್ಮ ಇನ್ನೀ ಅಸ್‌ಅಲುಕ ಮಿನ್ ಫದ್ಲಿಕ್." ಇಲ್ಲಿ ಅಲ್ಲಾಹನೊಂದಿಗೆ ಅವನ ಔದಾರ್ಯವನ್ನು ಮತ್ತು ಧರ್ಮಸಮ್ಮತವಾದ ಉಪಜೀವನ ಸೇರಿದಂತೆ ಅವನಿಂದ ಹೆಚ್ಚಿನ ಸಹಾಯವನ್ನು ಕೇಳಲಾಗುತ್ತಿದೆ.

Hadeeth benefits

  1. ಮಸೀದಿಯನ್ನು ಪ್ರವೇಶಿಸುವಾಗ ಮತ್ತು ಮಸೀದಿಯಿಂದ ಹೊರಬರುವಾಗ ಈ ಪ್ರಾರ್ಥನೆಗಳನ್ನು ಪಠಿಸುವುದು ಅಪೇಕ್ಷಣೀಯವಾಗಿದೆ.
  2. ಮಸೀದಿಯನ್ನು ಪ್ರವೇಶಿಸುವಾಗ ವಿಶೇಷವಾಗಿ ಕರುಣೆಯ ಬಗ್ಗೆ ಮತ್ತು ಮಸೀದಿಯಿಂದ ಹೊರಬರುವಾಗ ವಿಶೇಷವಾಗಿ ಉದಾರತೆಯ ಬಗ್ಗೆ ಪ್ರಸ್ತಾಪಿಸಲಾಗಿದೆ. ಏಕೆಂದರೆ ಮಸೀದಿಯನ್ನು ಪ್ರವೇಶಿಸುವವನು ಅಲ್ಲಾಹನಿಗೆ ಮತ್ತು ಅವನ ಸ್ವರ್ಗಕ್ಕೆ ಹತ್ತಿರವಾಗಲು ಬಯಸುತ್ತಾನೆ. ಆದ್ದರಿಂದ ಇಲ್ಲಿ ಅಲ್ಲಾಹನ ದಯೆಯನ್ನು ಪ್ರಸ್ತಾಪಿಸಿರುವುದು ಹೆಚ್ಚು ಸೂಕ್ತವಾಗಿದೆ. ಮಸೀದಿಯಿಂದ ಹೊರಬರುವವನು ನಂತರ ಭೂಮಿಯಲ್ಲಿ ಉಪಜೀವನವನ್ನು ಹುಡುಕುತ್ತಾ ಹೊರಡುತ್ತಾನೆ. ಆದ್ದರಿಂದ ಇಲ್ಲಿ ಅಲ್ಲಾಹನ ಉದಾರತೆಯನ್ನು ಪ್ರಸ್ತಾಪಿಸಿರುವುದು ಹೆಚ್ಚು ಸೂಕ್ತವಾಗಿದೆ.
  3. ಮಸೀದಿಯನ್ನು ಪ್ರವೇಶಿಸಲು ಬಯಸಿದಾಗ ಮತ್ತು ಮಸೀದಿಯಿಂದ ಹೊರಬರಲು ಬಯಸಿದಾಗ ಈ ಪ್ರಾರ್ಥನೆಗಳನ್ನು ಪಠಿಸಬೇಕಾಗಿದೆ.